ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ – News Kadaba

ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ

(ನ್ಯೂಸ್ ಕಡಬ) newskadaba.com ಕೋಲಾರ, ಆ.05. ಟೆಂಪೊ ಟ್ರಾವೆಲರ್​ಗೆ ಲಾರಿಯೊಂದು ಢಿಕ್ಕಿಯಾದುದರಿಂದ ನಾಲ್ವರು ವಿದೇಶಿಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಕೋಲಾರದ ಆಂಧ್ರ ಗಡಿ ಪ್ರದೇಶದಲ್ಲಿ ನಡೆದಿದೆ.

ಕೋಲಾರದ ಗಡಿ ಆಂದ್ರ ಪ್ರದೇಶದ ಅನಂತಪುರಂ ಜಿಲ್ಲೆ ಪುಂಗನೂರು ಈಡಗಪಲ್ಲಿ ಬಳಿ ಈ ದುರ್ಘಟನೆ ನಡೆದಿದೆ. ಇವರು ಸ್ಪೇನ್​​ ದೇಶದ ಜನರು ಭಾರತದಲ್ಲಿ ನಡೆಸುತ್ತಿರುವ ರೂರಲ್ ಡೆವಲಪ್‍ಮೆಂಟ್ ಟ್ರಸ್ಟಿನ ಕಾರ್ಯ ವೈಖರಿಯ ಪರಿಶೀಲನೆಗೆಂದು ಭಾರತಕ್ಕೆ ಆಗಮಿಸಿದ್ದು, ಅನಂತಪುರಂ ನಿಂದ ಪುದುಚೇರಿಗೆ ಪ್ರಯಾಣಿಸುತ್ತಿದ್ದಾಗ ಟೆಂಪೋ ಟ್ರಾವೆಲ್ಲರ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಇನ್ನುಳಿದ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪುಂಗನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ಪ್ರಾನ್ಸಿಸ್ಕೋ ಫೆಡ್ರೋಸಾ, ವಿನ್ಸೆಂಟ್ ಫ್ರೆಝ್, ನೀವ್ಸ್ ಲೋಫೆಝ್, ಜೊಸೆಫಾ ಮೊರಾನ್, ಎಂದು ಗುರುತಿಸಲಾಗಿದ್ದು, ಟ್ರಾವೆಲ್ಲರ್ ಚಾಲಕನ ಹೆಸರು ತಿಳಿದುಬಂದಿಲ್ಲ. ಆರು ಮಂದಿ ಗಂಭಿರ ಗಾಯಗೊಂಡಿದ್ದು, ಗಾಯಗೊಂಡಿರುವ ವಿದೇಶಿ ಪ್ರಜೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಚಿತ್ತೂರು ಜಿಲ್ಲಾಧಿಕಾರಿ ವೆಟ್ರಿ ಸೆಲ್ವಿ ಭರವಸೆ ನೀಡಿದ್ದಾರೆ.

Scroll to Top