ಕಡಬ: ವಿವಾಹಿತ ಮಹಿಳೆ ನೇಣುಬಿಗಿದು ಆತ್ಮಹತ್ಯೆ ➤ 24 ಗಂಟೆಯೊಳಗೆ ಕಡಬ ವ್ಯಾಪ್ತಿಯಲ್ಲಿ ಮೂವರಿಂದ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ವಿವಾಹಿತ ಮಹಿಳೆಯೋರ್ವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಅರ್ಪಾಜೆ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಅರ್ಪಾಜೆ ನಿವಾಸಿ ಶ್ರೀಮತಿ ವೇದಾವತಿ ಎಂದು ಗುರುತಿಸಲಾಗಿದೆ. ವೇದಾವತಿಯವರ ಗಂಡ ಸುಮಾರು 5 ತಿಂಗಳ ಹಿಂದೆ ಖಾಯಿಲೆಯಿಂದ ಮೃತಪಟ್ಟಿದ್ದು, ಇದರಿಂದಾಗಿ ಮನನೊಂದ ವೇದಾವತಿಯವರು ಶುಕ್ರವಾರ ಅಪರಾಹ್ನದಿಂದ ರಾತ್ರಿಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top