ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ – News Kadaba

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಆಧಾರ್ ಕಾರ್ಡ್ ಬಗ್ಗೆ ಕೆಲವು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಯುತ್ತಿರುವ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ uidai.gov.in ನ್ನು ಬೆಂಗಳೂರಿನ ಕಂಪೆನಿಯೊಂದು ಹ್ಯಾಕ್ ಮಾಡಿದೆ ಎನ್ನುವ ಆಘಾತಕಾರಿ ವಿಷಯ ಗುರುವಾರ ಸಂಜೆ ತಿಳಿದುಬಂದಿದೆ.

ಇ-ಕೆವೈಸಿ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯು ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ನ್ನು ಹ್ಯಾಕ್ ಮಾಡಿ ಗೌಪ್ಯ ಮಾಹಿತಿಯನ್ನ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆಧಾರ್ ಕಾರ್ಡ್ ಡೆಪ್ಯುಟಿ ಡೈರೆಕ್ಟರ್ ಅಶೋಕ್ ಲೆನಿನ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್ ಅಭಿನವ್ ಶ್ರೀವಾತ್ಸವ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪ್ರಕರಣವನ್ನು ಸೈಬರ್ ಕ್ರೈಂಗೆ ಹಸ್ತಾಂತರಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

 

Scroll to Top