ಬೆಳ್ಳಾರೆ: ಬುದ್ದಿಮಾಂದ್ಯ ನೇಣು ಬಿಗಿದು ಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com,ಬೆಳ್ಳಾರೆ.ಜೂ.29. ವ್ಯಕ್ತಿಯೋರ್ವರು ಮಾನಸಿಕ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆಯ, ಅಜ್ಜಿಗುಡ್ಡೆ ಎಂಬಲ್ಲಿ ಗುರುವಾರ ದಂದು ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬೆಳ್ಳಾರೆಯ ಸುಳ್ಯ ತಾಲೂಕಿನ ಕಲ್ಮ ಡ್ಕ ಗ್ರಾಮದ, ಅಜ್ಜಿಗುಡ್ಡೆ ಮನೆ ಬಾಬು(31) ಎಂದು ಗುರುತಿಸಲಾಗಿದೆ.

ಬಾಲ್ಯದಿಂದಲೂ ಮಾನಸಿಕ ಖಾಯಿಲೆ ಹಾಗೂ ಬುದ್ದಿಮಾಂದ್ಯನಿದ್ದು,ಆತನಿಗೆ ಹಲವು ಬಾರಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಫಲಕಾರಿಯಾಗಿರಲ್ಲಿಲ. ಇಂತಹ ಮಾನಸಿಕ ಹಿನ್ನಲೆಯಲ್ಲಿ ನೆರೆಮನೆಯವರ ಜಾಗದ ಗುಡ್ಡದಲ್ಲಿ ಗೇರು ಮರದ ಕೊಂಬೆಗೆ ನೇಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಕೊಂಡು ಗುರುವಾರ ದಂದು ಸಂಜೆ ಆತ್ಮಹತ್ಯೆ ಮಾಡಿಕೊಂಡ್ಡಿದ್ದಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Scroll to Top