ಮಾರ್ ಇವಾನಿಯೋಸ್ ಕಾಲೇಜು: ವಿಶ್ವ ಯೋಗ ದಿನಾಚರಣೆ.

(ನ್ಯೂಸ್ ಕಡಬ) newskadaba.com ಕುಂತೂರು,ಜೂ.25. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಜೂನ್ 21 ರಂದು ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ತರಬೇತಿಯನ್ನು ನೀಡಲಾಯಿತು.

ತರಬೇತುದಾರಾಗಿ ಆಗಮಿಸಿದ ಯೋಗ ಶಿಕ್ಷಕ ಶ್ರೀ ವಿಜೇಶ್ ಅವರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳು ಯೋಗ ದಿನಾಚರಣೆಯನ್ನು ಆಚರಿಸಿದರು.

Scroll to Top