ಅಡ್ಯನಡ್ಕ: ಜನತಾ ಪ್ರೌಢಶಾಲೆಯಲ್ಲಿ ‘ವಿಶ್ವ ಯೋಗ ದಿನಾಚರಣೆ’

(ನ್ಯೂಸ್ ಕಡಬ)newskadaba.com ಅಡ್ಯನಡ್ಕ,ಜೂ.21. ಅಡ್ಯನಡ್ಕ ಜನತಾ ಪ್ರೌಢಶಾಲೆಯ ಕ್ರೀಡಾ ಸಂಘದ ವತಿಯಿಂದ ಜೂ.21ರಂದು ‘ವಿಶ್ವ ಯೋಗ ದಿನಾಚರಣೆ’  ಜರುಗಿತು. ದೈಹಿಕ ಶಿಕ್ಷಕ ಮತ್ತು ಯೋಗ ತರಬೇತುದಾರ ಉದಯಕೃಷ್ಣ ಭಟ್ ನೇತೃತ್ವದಲ್ಲಿ ಪ್ರಾಯೋಗಿಕ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಶಿವಕುಮಾರ್ ಸಾಯ ಪ್ರಸ್ತಾವಿಸಿದರು. ವಿದ್ಯಾರ್ಥಿನಿಯರಾದ ಪಂಚಮಿಕುಮಾರಿ ಮತ್ತು ಶ್ರಾವ್ಯ ಮಾತನಾಡಿದರು. ಕ್ರೀಡಾ ಸಂಘದ ಉಪಾಧ್ಯಕ್ಷ ಪ್ರಜ್ವಲ್ ಸ್ವಾಗತಿಸಿ, ಕ್ರೀಡಾ ಸಂಘದ ಅಧ್ಯಕ್ಷೆ ಮಮತ ವಂದಿಸಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು

Scroll to Top