
(ನ್ಯೂಸ್ ಕಡಬ) newskadaba.com, ನ 06 .ಬಿಎಂಟಿಸಿ ಪಾಸ್ ದರ ಏರಿಕೆಯ ಬೆನ್ನಲ್ಲೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಟಿಕೆಟ್ ಹಾಗೂ ಮಾಸಿಕ ಪಾಸ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿ ಆದೇಶ ಹೊರಡಿಸಿದೆ. ನಿತ್ಯ ಪ್ರಯಾಣಿಕರು ಮತ್ತು ಹಿರಿಯ ನಾಗರಿಕರಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದ್ದು, ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ
ವೇಗದೂತ ಮತ್ತು ತಡೆರಹಿತ ಬಸ್ಗಳು ಕನಿಷ್ಠ ಹಂತ: ಸಾಮಾನ್ಯ ಪ್ರಯಾಣಿಕರಿಗೆ ರೂ. 520 ರಿಂದ 640ಕ್ಕೆ, ಹಿರಿಯ ನಾಗರಿಕರಿಗೆ ರೂ. 465 ರಿಂದ 570ಕ್ಕೆ ಏರಿಕೆ.ಗರಿಷ್ಠ ಹಂತ: ಸಾಮಾನ್ಯ ಪ್ರಯಾಣಿಕರಿಗೆ ರೂ. 3,220 ರಿಂದ 3,960ಕ್ಕೆ, ಹಿರಿಯ ನಾಗರಿಕರಿಗೆ ರೂ. 2,900 ರಿಂದ 3,570ಕ್ಕೆ ಹೆಚ್ಚಳ.
ಸಾಮಾನ್ಯ ಬಸ್ಗಳು ಕನಿಷ್ಠ ಹಂತ: ಸಾಮಾನ್ಯ ಪ್ರಯಾಣಿಕರಿಗೆ ರೂ. 460 ರಿಂದ 570ಕ್ಕೆ, ಹಿರಿಯ ನಾಗರಿಕರಿಗೆ ರೂ. 415 ರಿಂದ 510ಕ್ಕೆ ಏರಿಕೆ. ಗರಿಷ್ಠ ಹಂತ: ಸಾಮಾನ್ಯ ಪ್ರಯಾಣಿಕರಿಗೆ ರೂ. 2,070 ರಿಂದ 2,550ಕ್ಕೆ, ಹಿರಿಯ ನಾಗರಿಕರಿಗೆ ರೂ. 1,865 ರಿಂದ 2,290ಕ್ಕೆ ಏರಿಕೆ.ದರ ಏರಿಕೆಯ ಈ ನಿರ್ಧಾರದಿಂದ ನೌಕರರು, ದಿನಗೂಲಿ ನೌಕರರು ಹಾಗೂ ನಿತ್ಯ ಸಂಚರಿಸುವ ಜನಸಾಮಾನ್ಯರಿಗೆ ತೊಂದರೆಯುಂಟಾಗಿದೆ.




