ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಒಂದೇ ದಿನದಲ್ಲಿ ಭಾರೀ ಇಳಿಕೆಯಾದ ಚಿನ್ನದ ಬೆಲೆ!

(ನ್ಯೂಸ್‌ ಕಡಬ) newskadaba.com, ನ 06 . ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹235 ಇಳಿಕೆಯಾಗಿ ₹13,150ಕ್ಕೆ ತಲುಪಿದ್ದರೆ, 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹256 ಇಳಿಕೆಯಾಗಿ ₹14,346ಕ್ಕೆ ಇಳಿದಿದೆ.

ಇದರಂತೆ, 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹1,31,500 ಹಾಗೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹1,43,460 ಆಗಿದೆ. ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಈ ದರ ಇಳಿಕೆ ಕೊಂಚ ಸಮಾಧಾನ ತಂದಿದೆ.

Scroll to Top