ಅನ್ನಭಾಗ್ಯ ಯೋಜನೆ: ಆಗಸ್ಟ್ ತಿಂಗಳು ರಾಜ್ಯ ಸರ್ಕಾರದ ಉಚಿತ ಅಕ್ಕಿ ಇಲ್ಲ



(ನ್ಯೂಸ್‌ ಕಡಬ) newskadaba.com,  ಆ.31: ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ ಅಕ್ಕಿ ವಿತರಣೆಗೆ ಹಿನ್ನಡೆಯಾಗಿದೆ. ಈ ತಿಂಗಳು ರಾಜ್ಯ ಸರ್ಕಾರದ ಪಾಲಿನ ಉಚಿತ ಅಕ್ಕಿ ಸಿಗುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಪಾಲಿನ 4 ಕೆಜಿ ಅಕ್ಕಿ ಮತ್ತು 6 ಕೆಜಿ ರಾಗಿಯನ್ನು ಮಾತ್ರ ಪಡಿತರದಾರರಿಗೆ ವಿತರಿಸಲಾಗುತ್ತಿದೆ.







ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಪೂರ್ಣ 10 ಕೆಜಿ ಉಚಿತ ಅಕ್ಕಿ ವಿತರಣೆ ನಿಯಮಿತವಾಗಿ ಮರುಆರಂಭಗೊಳ್ಳಲಿದೆ ಎಂದು ರೇಷನ್ ಅಂಗಡಿ ಮಾಲೀಕರು ತಿಳಿಸಿದ್ದಾರೆ.






 

ಆಹಾರ ಧಾನ್ಯಗಳ ಕೊರತೆ ಮತ್ತು ದಾಸ್ತಾನು ಹೊಂದಾಣಿಕೆ ಕಾರಣದಿಂದ ಈ ಬದಲಾವಣೆ ಉಂಟಾಗಿದ್ದು, ಪಡಿತರದಾರರು ಈ ತಿಂಗಳು ಲಭ್ಯವಿರುವ ರಾಗಿ ಹಾಗೂ ಕೇಂದ್ರದ ಪಾಲಿನ ಧಾನ್ಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

error: Content is protected !!
Scroll to Top