(ನ್ಯೂಸ್ ಕಡಬ) newskadaba.com, ಆ.31: ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026’ ಅಧಿಸೂಚನೆ ಹೊರಡಿಸಿದ್ದು, 180 ದಿನಗಳ ಒಳಗೆ ದೇಶಾದ್ಯಂತ ಏಕರೂಪದ ‘ಭಾರತೀಯ ಪ್ರಮಾಣಿತ ಸಮಯ ಅನುಷ್ಠಾನಗೊಳ್ಳಲಿದೆ.
ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ತಗ್ಗಿಸಿ, ಭಾರತದ ಸ್ವದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆಯಾದ NavIC ಹಾಗೂ ಅನುಮೋದಿತ ಸಮಯ ಮೂಲಗಳನ್ನು ಬಳಸಿಕೊಂಡು ನಿಖರ ಸಮಯ ಪ್ರಸಾರ ಮಾಡಲಾಗುತ್ತದೆಬ್ಯಾಂಕಿಂಗ್, ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿಮಾನಯಾನ, ವಿದ್ಯುತ್ ಶಕ್ತಿ ವ್ಯವಸ್ಥೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ನಿಖರ ಹಾಗೂ ವಿಶ್ವಾಸಾರ್ಹ ಟೈಮ್‌ಸ್ಟ್ಯಾಂಪ್ ಕಡ್ಡಾಯವಾಗಲಿದೆ.
ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಮತ್ತು ನೆಟ್‌ವರ್ಕ್ ಸಂಸ್ಥೆಗಳು ತಮ್ಮ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸಿ, ನೂತನ ISTಗೆ ತಕ್ಕಂತೆ ಹೊಂದಿಕೊಳ್ಳಲು 180 ದಿನಗಳ ಕಾಲಾವಕಾಶ ನೀಡಲಾಗಿದೆ.ಜುಲೈ 2026ರಲ್ಲಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯದಲ್ಲಿ (RRSL) IST ಪ್ರಸರಣ ಜಾಲವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದ್ದು, CSIR-NPL, ISRO, SEBI, NSE, BSNL ಸಂಸ್ಥೆಗಳು ಸಹಭಾಗಿತ್ವ ವಹಿಸಿವೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಿಗದಿಪಡಿಸಿದ ಕಾಲಮಿತಿಯೊಳಗೆ ಅಗತ್ಯ ತಾಂತ್ರಿಕ ಬದಲಾವಣೆ ಪೂರ್ಣಗೊಳಿಸಿ ಸಿದ್ಧರಾಗಲು ಸಂಬಂಧಿಸಿದ ಕ್ಷೇತ್ರಗಳಿಗೆ ನಿರ್ದೇಶನ ನೀಡಿದ್ದಾರೆ.








