ಮಂಗಳೂರು: ವಿದೇಶದಿಂದ ಅಗಮಿಸಿದ ಆರೋಪಿಯು  ವಿಮಾನ ನಿಲ್ದಾಣದಲ್ಲಿ ಬಂಧನ



(ನ್ಯೂಸ್‌ ಕಡಬ) newskadaba.com,  ಆ .05:  ೨೦೧೯ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಂಗಳೂರಿನ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮುಂಬೈನ ಅಂಧೇರಿ ಪಶ್ಚಿಮದ ನಿವಾಸಿ ಅಶೋಕ್ ನಾರಾಯಣ್ (೬೩) ಎಂದು ಗುರುತಿಸಲಾಗಿದೆ.







೨೦೧೯ರಲ್ಲಿ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಶೋಕ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೂ ಈತ ಬಂಧನದಿಂದ ತಪ್ಪಿಸಿಕೊಳ್ಳಲು ವಿಳಾಸ ಬದಲಾಯಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ನಾಪತ್ತೆ ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿತ್ತು.ತನಿಖೆಯ ವೇಳೆ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದು ತಿಳಿದುಬಂದಿತ್ತು. ತಕ್ಷಣ ಜಾಗೃತರಾದ ಪೊಲೀಸರು, ಆತನ ಪಾಸ್‌ಪೋರ್ಟ್ ವಿವರಗಳನ್ನು ಸಂಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿಯ ಮೂಲಕ ‘ಲುಕ್ ಔಟ್ ಸರ್ಕ್ಯುಲರ್’ ಹೊರಡಿಸಿದ್ದರು.






ಆಗಸ್ಟ್ ೧ರಂದು ಆರೋಪಿ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದಂತೆ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಬಳಿಕ ಆಗಸ್ಟ್ ೨ರಂದು ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ರವಿಕುಮಾರ್ ಅವರು ಮುಂಬೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು, ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

error: Content is protected !!
Scroll to Top