ರಾಜ್ಯದಲ್ಲಿ SIR ಅವಧಿ ವಿಸ್ತರಣೆ ಆ. 8 ಗಣತಿ ನಮೂನೆ ವಿತರಣೆ



(ನ್ಯೂಸ್ ಕಡಬ) newskadaba.com ಜು. 16. ಕರ್ನಾಟಕ, ದೆಹಲಿ, ಪಂಜಾಬ್‌ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.







ಕರ್ನಾಟಕದಲ್ಲಿ ಜುಲೈ 29ರ ಬದಲಿಗೆ ಆಗಸ್ಟ್ 8ರ ವರೆಗೆ ಗಣತಿ ನಮೂನೆ ವಿತರಿಸಲು ಅವಕಾಶ ನೀಡಲಾಗಿದೆ. ಕರಡು ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.






ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರ ಬದಲಿಗೆ ಅಕ್ಟೋಬರ್ 19 ರಂದು ಪ್ರಕಟಿಸಲಾಗುವುದು ಎಂದು ಪರಿಷ್ಕೃತ ಪ್ರಕಟಣೆ ತಿಳಿಸಿದೆ..

error: Content is protected !!
Scroll to Top