(ನ್ಯೂಸ್ ಕಡಬ) newskadaba.com, ಆ .05: ₹2,000 ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಪಾವತಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಕೇವಲ ವ್ಯಾಪಾರಿಗಳಿಗೆ ಮಾಡುವ ₹2,000 ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ 0.25% ರಿಂದ 0.4% ರವರೆಗೆ MDR ಶುಲ್ಕ ವಿಧಿಸಲು ಅನುಮತಿ ನೀಡುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ‘ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ’ಯಲ್ಲಿ, ಡಿಜಿಟಲ್ ಪಾವತಿಗಳ ಮೇಲೆ MDR ವಿಧಿಸುವುದಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಲು ಪ್ರಸ್ತಾವಿಸಲಾಗಿದೆ.
ಹಾಲು, ತರಕಾರಿ, ದಿನಸಿ ಹಾಗೂ ಆಟೋ-ಟ್ಯಾಕ್ಸಿ ಬಾಡಿಗೆಯಂತಹ ದೈನಂದಿನ ಸಣ್ಣ ಪಾವತಿಗಳ ಮೇಲೆ ಇದು ಯಾವುದೇ ಪರಿಣಾಮ ಬೀರಲಾರದು.₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳು ಒಟ್ಟು UPI ಸಂಖ್ಯೆಯಲ್ಲಿ 5% ನಷ್ಟಿದ್ದರೂ, ಮೌಲ್ಯದ ದೃಷ್ಟಿಯಿಂದ ಇವು 65% ರಷ್ಟು ಪಾಲನ್ನು ಹೊಂದಿವೆ.ಈ ಪ್ರಸ್ತಾಪದ ಜಾರಿ ಕುರಿತು ಸರ್ಕಾರಿ ಮಟ್ಟದಲ್ಲಿ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.








