(ನ್ಯೂಸ್ ಕಡಬ) newskadaba.com, ಜು.02: ಕರ್ನಾಟಕ ಸರ್ಕಾರವು ನಾಲ್ಕು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC ಮತ್ತು KKRTC) ಸುಮಾರು 1.05 ಲಕ್ಷ ನೌಕರರ ಮೂಲ ವೇತನವನ್ನು 12.5% ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ಈ ಪರಿಷ್ಕೃತ ವೇತನವು ಜುಲೈ ತಿಂಗಳಿನಿಂದ ಜಾರಿಗೆ ಬರಲಿದ್ದು, 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.ನೌಕರರಿಗೆ ಪಾವತಿಸಬೇಕಿರುವ ಹಳೆಯ ವೇತನ ಹಿಂಬಾಕಿಯ (Arrears) ಮೊದಲ ಕಂತಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ.
ಈ ವೇತನ ಪರಿಷ್ಕರಣೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 72.80 ಕೋಟಿ ರೂ. ವೆಚ್ಚವಾಗಲಿದೆ.







