“ಮಹಿಳೆಯರನ್ನು ಪುರುಷರೇ ಸಾಕಬೇಕೆಂಬ ನಿಯಮವಿಲ್ಲ”: ಕಣ್ಣುಮುಚ್ಚಿ ಜೀವನಾಂಶ ನೀಡದಂತೆ ಹೈಕೋರ್ಟ್ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com, ಜೂ. 30: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಮತ್ತು ಯಾವುದೇ ಇತರ ಕೌಟುಂಬಿಕ ಜವಾಬ್ದಾರಿಗಳಿಲ್ಲದ ಆರ್ಥಿಕವಾಗಿ ಸಬಲಳಾದ ಪತ್ನಿಗೆ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿದ್ದರು. ಪತಿಯ ಮಾಸಿಕ ಸಂಬಳ 60,646 ರೂ. ಆಗಿದ್ದರೆ, ಪತ್ನಿಯ ಸಂಬಳ 1 ಲಕ್ಷ ರೂ. ಆಗಿತ್ತು. ಆದಾಗ್ಯೂ, ವಿಚಾರಣಾ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 20 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು.ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರ ಪೀಠವು ಆ ಆದೇಶವನ್ನು ರದ್ದುಗೊಳಿಸಿದೆ.

“ಮಹಿಳೆಯರನ್ನು ಪುರುಷರೇ ಸಾಕಬೇಕು” ಎಂಬ ಸಾಂಪ್ರದಾಯಿಕ ಕಾರಣದ ಮೇರೆಗೆ ನ್ಯಾಯಾಲಯಗಳು ಕಣ್ಣುಮುಚ್ಚಿ ಜೀವನಾಂಶ ಮಂಜೂರು ಮಾಡಬಾರದು.ಪತಿಯ ಜೀವನಮಟ್ಟಕ್ಕೆ ಅನುಗುಣವಾಗಿ ಬದುಕಲು ಪತ್ನಿಯ ಬಳಿ ಯಾವುದೇ ಆರ್ಥಿಕ ಮೂಲಗಳಿಲ್ಲ ಎಂದು ಸಾಬೀತಾದಾಗ ಮಾತ್ರ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Scroll to Top