ನಂಜನಗೂಡು: ಜೆಸಿಬಿ ಬ್ಲೇಡ್‌ಗೆ ಸಿಲುಕಿ ಕವಚ ಜರ್ಜರಿತವಾಗಿದ್ದ ಆಮೆಗೆ ಮರುಜೀವ; ಕಪಿಲಾ ನದಿಗೆ ಬಿಡುಗಡೆ



(ನ್ಯೂಸ್‌ ಕಡಬ) newskadaba.com,  ಜೂ.17: ನಂಜನಗೂಡು ಸಮೀಪದ ಜಮೀನಿನಲ್ಲಿ ಜೆಸಿಬಿ ಕಾಮಗಾರಿ ವೇಳೆ ಮಣ್ಣಿನಲ್ಲಿದ್ದ ಆಮೆಯೊಂದು ಯಂತ್ರದ ಬ್ಲೇಡ್‌ಗೆ ಸಿಲುಕಿ, ಅದರ ಕವಚ (Shell) ಸಂಪೂರ್ಣ ಜರ್ಜರಿತವಾಗಿತ್ತು.







ಬದುಕುವುದು ಅಸಾಧ್ಯ ಎನ್ನುತ್ತಿದ್ದ ಸಂದರ್ಭದಲ್ಲಿ ಪ್ರಾಣಿ ರಕ್ಷಕ ಚಂದ್ರಶೇಖರ್ ಅವರು ಆಮೆಯನ್ನು ವಶಕ್ಕೆ ಪಡೆದು, ಗಾಯವನ್ನು ಸ್ವಚ್ಛಗೊಳಿಸಿ ನಿರಂತರ ವೈದ್ಯಕೀಯ ಆರೈಕೆ ನೀಡಿದರು.ಚಿಕಿತ್ಸೆಯ ಬಳಿಕ ಆಮೆ ಸಂಪೂರ್ಣ ಗುಣಮುಖವಾಗಿದ್ದು, ಚಂದ್ರಶೇಖರ್ ಅವರು ಅದನ್ನು ಅದರ ನೈಸರ್ಗಿಕ ವಾಸಸ್ಥಳವಾದ ಕಪಿಲಾ ನದಿಗೆ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.






ಅಭಿವೃದ್ಧಿ ಕಾಮಗಾರಿಗಳ ನಡುವೆ ವನ್ಯಜೀವಿಗಳ ರಕ್ಷಣೆ ಮುಖ್ಯ. ಇಂತಹ ಘಟನೆಗಳು ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆ ಅಥವಾ ಪ್ರಾಣಿ ರಕ್ಷಕರನ್ನು ಸಂಪರ್ಕಿಸಿ.

error: Content is protected !!
Scroll to Top