ಇನ್ಮುಂದೆ ದ್ವಿತೀಯ ಪಿಯುಸಿ ಪ್ರವೇಶಾತಿ ವೇಳೆಯೇ ಸಿಇಟಿ ಅರ್ಜಿ ಸಲ್ಲಿಕೆ: ಕೆಇಎ ಹೊಸ ನಿಯಮ

(ನ್ಯೂಸ್‌ ಕಡಬ) newskadaba.com,  ಜೂ.13 : ವಿದ್ಯಾರ್ಥಿಗಳು ಇನ್ಮುಂದೆ ಸಿಇಟಿ ಪರೀಕ್ಷೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು.

ಕಾಲೇಜಿನಲ್ಲೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ವಿದ್ಯಾರ್ಥಿಗಳು ನೇರವಾಗಿ ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.ಸಾಮಾನ್ಯವಾಗಿ ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಆರ್​ಡಿ ನಂಬರ್ ಹಾಗೂ ಜಾತಿ ಪ್ರಮಾಣಪತ್ರಗಳಲ್ಲಿ ಆಗುತ್ತಿದ್ದ ತಪ್ಪುಗಳು ಮತ್ತು ಕೌನ್ಸಿಲಿಂಗ್ ವೇಳೆಯ ತೊಂದರೆಗಳು ಇದರಿಂದ ತಪ್ಪಲಿವೆ.

ಪಿಯುಸಿ ಪರೀಕ್ಷೆಯ ಸಿದ್ಧತೆಯ ನಡುವೆ ಸಿಇಟಿ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಆಕಾಂಕ್ಷಿಗಳಿಗೆ ಈ ನೂತನ ಪ್ರಯೋಗವು ದೊಡ್ಡ ವರದಾನವಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ತಿಳಿಸಿದ್ದಾರೆ.

Scroll to Top