ಇರಾನ್ ಜೊತೆ ಸದ್ಯಕ್ಕಿಲ್ಲ ಕದನ ವಿರಾಮ ಒಪ್ಪಂದ- ಪಾಕ್ ನಲ್ಲಿ ಮಾತುಕತೆ



(ನ್ಯೂಸ್‌ ಕಡಬ) newskadaba.com,  ಎ.17:ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಚದುರಂಗದಾಟ ಹೊಸ ತಿರುವು ಪಡೆದುಕೊಂಡಿದೆ..





ಇರಾನ್ ಜತೆಗಿನ ಕದನ ವಿರಾಮವನ್ನು ವಿಸ್ತರಿಸಲು ಅಮೆರಿಕ ಕೋರಿದೆ ಎಂಬ ವರದಿಗಳನ್ನು ಶ್ವೇತಭವನ ಬುಧವಾರ ಅಧಿಕೃತವಾಗಿ ನಿರಾಕರಿಸಿದೆ. ಆದರೆ, ಮಾತುಕತೆಗಳು ಜೀವಂತವಾಗಿವೆ ಮತ್ತು ಮುಂದಿನ ಸುತ್ತಿನ ಸಭೆಯು ಮತ್ತೆ ಪಾಕಿಸ್ತಾನದಲ್ಲೇ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಪಷ್ಟಪಡಿಸಿದೆ.






ಒಪ್ಪಂದ ವಿಸ್ತರಣೆ ಸುದ್ದಿ ಸುಳ್ಳು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಔಪಚಾರಿಕವಾಗಿ ಕದನ ವಿರಾಮ ವಿಸ್ತರಣೆಯನ್ನು ಕೋರಿದ್ದೇವೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿವೆ. ಆದರೆ, ಸಂವಹನ ಪ್ರಕ್ರಿಯೆಯು ನಿಂತಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿಲುವನ್ನು ಇರಾನ್‌ಗೆ ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರ ಬೇಡಿಕೆಗಳನ್ನು ಈಡೇರಿಸುವುದು ಇರಾನ್‌ನ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಮಧ್ಯವರ್ತಿಯಾದ ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲ ಮುಂದಿನ ಸುತ್ತಿನ ಮಾತುಕತೆಗೆ ಸ್ಥಳ ನಿಗದಿಯ ಬಗ್ಗೆ ಮಾಹಿತಿ ನೀಡಿದ ಲೀವಿಟ್, ಪಾಕಿಸ್ತಾನಿಗಳ ಮೂಲಕ ಸಂವಹನ ನಡೆಸುವುದು ಮುಖ್ಯ ಎಂದು ಟ್ರಂಪ್ ಭಾವಿಸುತ್ತಾರೆ. ಈ ಮಾತುಕತೆಯಲ್ಲಿ ಪಾಕಿಸ್ತಾನವೇ ಏಕೈಕ ಮಧ್ಯವರ್ತಿಯಾಗಿ ಉಳಿಯಲಿದೆ. ಪ್ರಪಂಚದ ಅನೇಕ ದೇಶಗಳು ಸಹಾಯ ಮಾಡಲು ಮುಂದೆ ಬಂದಿದ್ದರೂ, ಅಮೆರಿಕವು ಪಾಕಿಸ್ತಾನದ ಸಂಧಾನದ ಹಾದಿಯನ್ನೇ ನಂಬಿದೆ ಎಂದರು.

error: Content is protected !!
Scroll to Top