ಚಿನ್ನದ ಆಸೆಯೇ ಮುಳುವಾಯ್ತು ಉದ್ಯಮಿಯನ್ನು ನಂಬಿಸಿ ಲಕ್ಷಾಂತರ ಹಣ ಲೂಟಿ ಮಾಡಿದ ಕಿರಾತಕರು



(ನ್ಯೂಸ್‌ ಕಡಬ) newskadaba.com,  ಮಾ.05: ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇನೆ ಅಂತ ಆಸೆ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯನ್ನ ಕರೆಸಿಕೊಂಡ ಖತರ್ನಾಕ್ ಗ್ಯಾಂಗ್ ಆತನ ಬಳಿ 20 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಬಳಿ ನಡೆದಿದೆ.





ಹೈದರಾಬಾದ್ ಮೂಲದ ವಿಶ್ವಪ್ರಸಾದ್ ರೆಡ್ಡಿ, ಕುಮಾರ್ ಎಂಬಾತನೊಂದಿಗೆ ವ್ಯವಹಾರ ಮಾಡಿದ್ದರು. ಕುಮಾರ್ ತನ್ನ ಬಳಿ ನಾಲ್ಕು ಕೆಜಿ ಚಿನ್ನದ ನಾಣ್ಯಗಳಿದ್ದು, ಕೇವಲ 20 ಲಕ್ಷಕ್ಕೆ ಒಂದು ಕೆಜಿ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದ. ಇದನ್ನೇ ನಂಬಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ವೆಂಕಟಗಿರಿ ಕೋಟೆ ಗ್ರಾಮದ ಬಳಿಯ ಖಾಸಗಿ ಬಡಾವಣೆಗೆ ವಿಶ್ವಪ್ರಸಾದ್ ರೆಡ್ಡಿ ಬಂದಿದ್ದಾರೆ.






ವಿಶ್ವಪ್ರಸಾದ್ ರೆಡ್ಡಿ ಬಂದ ಕೂಡಲೇ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ 20 ಲಕ್ಷ ರೂಪಾಯಿ ಹಣ ಹಾಗೂ ಮೊಬೈಲನ್ನ ಕಸಿದುಕೊಂಡು ಆರು ಮಂದಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.ಪ್ರಕರಣ ಸಂಬಂಧ ವಿಜಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಲೆಗಾಗಿ ತನಿಖೆ ನಡೆಸಿದ್ದಾರೆ.

error: Content is protected !!
Scroll to Top