ಟೆಕ್ಕಿ ಮಾಜಿ ಹೆಂಡತಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ



(ನ್ಯೂಸ್ಕಡಬ) newskadaba.com ಫೆ.19: ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ… ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ ಕಾರಣ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಮಹಿಳೆಯ 2ನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.





30 ರ ಹರೆಯದ ಕೊಲೆ ಆರೋಪಿ 2022 ರಲ್ಲಿ ಆ ಮಹಿಳೆಯನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆದಿತ್ತು. ಆರೋಪಿ ನಂತರ ಕೆನಡಾಕ್ಕೆ ತೆರಳಿದ್ದ. ಅಲ್ಲಿ ಪತ್ನಿ ಜೊತೆ ವಾಸವಾಗಿದ್ದ. ದಂಪತಿ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಮಹಿಳೆ ಭಾರತಕ್ಕೆ ವಾಪಸ್‌ ಆಗಿದ್ದರು. ನಂತರ ಮಹಾರಾಷ್ಟ್ರದಲ್ಲಿ ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಿಸಿದ್ದರು..






ಮಾಜಿ ಪತ್ನಿಯಿಂದಾಗಿ ತಾನು ಮತ್ತು ತನ್ನ ಕುಟುಂಬ ಮಾನಸಿಕ ನೋವನ್ನು ಅನುಭವಿಸಿದೆ. ಈ ನೋವು ನನ್ನ ತಾಯಿಗೆ ಕಾರಣವಾಯಿತು ಎಂದು ಭಾವಿಸಿದ್ದ ವ್ಯಕ್ತಿ ತನ್ನ ಮಾಜಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

error: Content is protected !!
Scroll to Top