ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯ; ಯುವತಿಯನ್ನು ಕೊಂದ ಎರಡು ಮಕ್ಕಳ ತಂದೆ – News Kadaba

ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯ; ಯುವತಿಯನ್ನು ಕೊಂದ ಎರಡು ಮಕ್ಕಳ ತಂದೆ

(ನ್ಯೂಸ್‌ ಕಡಬ) newskadaba.com,  ಫೆ.14: ಮಧ್ಯಪ್ರದೇಶದ ಭೋಪಾಲ್‌ನ ನಿಶಾತ್‌ಪುರ ಪ್ರದೇಶದ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಗುರುವಾರ (ಫೆ.12) ಸಂಜೆ 33 ವರ್ಷದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾರಂಭವಾಗಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕೊನೆಗೊಂಡ ಪ್ರೀತಿ, ದ್ರೋಹ, ಬ್ಲ್ಯಾಕ್‌ಮೇಲ್ ಮತ್ತು ಕೊಲೆಯಲ್ಲಿ ಅಂತ್ಯವಾದ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ

ಕೊಲೆಯಾದ ದುರ್ದೈವಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಸೋಮವಾರ (ಫೆ.9) ಸಿಯಾಳನ್ನು ಆಕೆಯ ವಿವಾಹಿತ ಪ್ರಿಯಕರ ಸಮೀರ್ ತನ್ನ ಕುಟುಂಬ ಸದಸ್ಯರ ಸಹಾಯದಿಂದ ಕತ್ತು ಹಿಸುಕಿ ಕೊಂದಿದ್ದಾನೆ..ಮೃತದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಮುಚ್ಚಿ ಸೋಮವಾರ ಮತ್ತು ಮಂಗಳವಾರದ (ಫೆ.10) ಮಧ್ಯರಾತ್ರಿ ವೇಳೆ ಅವರ ಮನೆಯ ಸಮೀಪವಿರುವ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾರೆ.

ಗುರುವಾರ (ಫೆ.12) ಸಂಜೆ, ಹತ್ತಿರದಲ್ಲಿ ಆಟವಾಡುತ್ತಿದ್ದ ಮಕ್ಕಳು ಟ್ಯಾಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದರು. ಒಳಗೆ ಕಬ್ಬಿಣದ ಪೆಟ್ಟಿಗೆ ತೇಲುತ್ತಿರುವುದನ್ನು ನಿವಾಸಿಗಳು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ತಲುಪಿ ಟ್ಯಾಂಕ್ ಅನ್ನು ಹುಡುಕಿದಾಗ, ಪೆಟ್ಟಿಗೆಯೊಳಗೆ ಸಿಯಾಳ ಕೊಳೆತ ದೇಹವು ಪತ್ತೆಯಾಗಿದೆ.

Scroll to Top