ಹೊಸ ವರ್ಷದ ಆರಂಭದ ದಿನವೇ ಕೇಂದ್ರ ಸರ್ಕಾರ ಜನರಿಗೆ ದೊಡ್ಡ ಶಾಕ್;ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಇವುಗಳ ಬೆಲೆ



(ನ್ಯೂಸ್‌ ಕಡಬ) newskadaba.com,ಜ.01 ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ಜನರಿಗೆ ಬಿಗ್ ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್ ಅನ್ನು ವಿಧಿಸಿ ಬುಧವಾರವೇ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಿಗರೇಟ್, ಬೀಡಿ, ಪಾನ್ ಮಸಾಲಗಳ ಬೆಲೆ ಫೆಬ್ರವರಿ 1ರಿಂದ ಹೆಚ್ಚಳವಾಗಲಿದೆ. ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಾಗಿರುತ್ತದೆ. ಇದು ಇವುಗಳ ಮೇಲೆ ವಿಧಿಸುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ.





ಧೂಮಪಾನ, ಮದ್ಯಪಾನ ಆರೋಗ್ಯಗಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರೂ ಇದನ್ನು ಬಳಸುವವರು ದಿನೇ ದಿನೇ ಹೆಚ್ಚಾಗುತ್ತಲೇ ಇದ್ದಾರೆ. ಅನೇಕರು ಇದನ್ನು ವ್ಯಸನವನ್ನಾಗಿ ಮಾಡಿಕೊಂಡಿದ್ದಾರೆ. ಇವರಿಗೆ ಈಗ ಬಿಗ್ ಶಾಕ್ ನೀಡಿದೆ ಕೇಂದ್ರ ಸರ್ಕಾರ. ಇವುಗಳ ಮೇಲಿನ ಜಿಎಸ್‌ಟಿ ಏರಿಕೆ ಮಾಡಲಾಗಿದ್ದು, ಇದರಿಂದ ಮುಂದಿನ ಫೆಬ್ರವರಿಯಿಂದ ಇವುಗಳು ದುಬಾರಿಯಾಗಲಿವೆ.






ಪಾನ್ ಮಸಾಲ, ಸಿಗರೇಟ್, ತಂಬಾಕು ಇಂತಹ ವಸ್ತುಗಳ ಮೇಲೆ ಫೆಬ್ರವರಿ 1 ರಿಂದ ಶೇ. 40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಲ್ಲಿ ಬೀಡಿಗಳಿಗೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿದೆ..ಈ ಕುರಿತು ಹಣಕಾಸು ಸಚಿವಾಲಯವು ಬುಧವಾರ ಅಧಿಸೂಚನೆಯನ್ನು ಹೊರಡಿಸಿದ್ದು, ಚೂಯಿಂಗ್ ತಂಬಾಕು, ಜರ್ದಾ ಪರಿಮಳಯುಕ್ತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ ನಿಯಮಗಳ ಅನುಸಾರ ಜಿಎಸ್ ಟಿ ವಿಧಿಸಿರುವುದಾಗಿ ಹೇಳಿದೆ.

error: Content is protected !!
Scroll to Top