ಫೆಬ್ರವರಿಯಿಂದ ಹೊಸ ಪಡಿತರ ವ್ಯವಸ್ಥೆ; ಏನಿದು ‘ಇಂದಿರಾ ಕಿಟ್‌’ ಘೋಷಣೆ

(ನ್ಯೂಸ್‌ ಕಡಬ) newskadaba.com,  ನ.20 ನವದೆಹಲಿ : ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್‌ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಅವರು ಜೋಳದ ಖರೀದಿ ಬೆಲೆ ಹಾಗೂ ‘ಇಂದಿರಾ ಕಿಟ್‌’ ಯೋಜನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಮಾಧ್ಯಮಕ್ಕೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರುತ್ತದೆ ಎಂದು ಸಚಿವರು ವಿವರಿಸಿದರು. ಇನ್ನು ತಮ್ಮ ಭಾಷಣದಲ್ಲಿ ಸಚಿವರು ಸಾರ್ವಜನಿಕ ವಿತರಣಾ ವ್ಯವಸ್ಥೆ ಗೆ ಸಾಕಷ್ಟು ಜೋಳ ದೊರಕದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.ವಿಶೇಷವಾಗಿ ‘ಮಾಲ್ದಂಡ್ಯ’ ಜಾತಿಯ ಜೋಳದ ಬೆಲೆ ಸಮಸ್ಯೆಯನ್ನು ಎತ್ತಿ ತೋರಿಸಿದ ಮುನಿಯಪ್ಪ ಅವರು, ‘ಈ ಜೋಳದ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕ್ವಿಂಟಟ್‌ಗೆ 1000 ರಿಂದ 1500 ಕಡಿಮೆಯಿದೆ. ಇದರ ಬೆಲೆಯನ್ನು ಹೆಚ್ಚಿಸಿದರೆ ರೈತರು ಸರ್ಕಾರಕ್ಕೆ ಸರಬರಾಜು ಮಾಡಲು ಪ್ರೋತ್ಸಾಹಿತರಾಗುತ್ತಾರೆ’ ಎಂದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು ಎಂದು ಮುನಿಯಪ್ಪ ಅವರು ಘೋಷಿಸಿದರು. ಈ ಕಿಟ್ಟನ್ನು ‘ಇಂದಿರಾ ಕಿಟ್‌’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

Scroll to Top