ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು – News Kadaba

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು

(ನ್ಯೂಸ್ ಕಡಬ) newskadaba.com ಬಿಹಾರ, ಜು.06. ಊರಿನ ಮುಸ್ಲಿಮರು ಇಸ್ಲಾಂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿ ಮುಸ್ಲಿಂ ವಕೀಲರೋರ್ವರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯ ಪೊಖಾರಿಯ ಎಂಬ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಮುಹಮ್ಮದ್ ಅನ್ವರ್(46) ತನ್ನ ಪುತ್ರರಾದ ಮುಹಮ್ಮದ್ ಅಮೀರ್(11) ಹಾಗೂ ಮುಹಮ್ಮದ್ ಶಬೀರ್‌(9) ರೊಂದಿಗೆ ಮತಾಂತರಗೊಂಡಿದ್ದಾರೆ. ಇವರು ತಮ್ಮ ಹೆಸರನ್ನು ಆನಂದ್ ಭಾರ್ತಿ, ಅಮನ್ ಭಾರ್ತಿ ಹಾಗೂ ಸುಮನ್ ಭಾರ್ತಿ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ.  ಕಳೆದ 18 ವರ್ಷಗಳಿಂದ ಪೊಖಾರಿಯ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿರುವ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ತನ್ನ ನೆರೆಮನೆಯವರಾದ ಸಯ್ಯದ್ ಕುಟುಂಬದವರು ಕಳೆದ ಏಳು ತಿಂಗಳಿಂದ ವಿನಾಕಾರಣ ತನಗೆ ಕಿರುಕುಳ ನೀಡುತ್ತಿದ್ದಾರೆ. ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಪಾಲಿಸದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಜುಲೈ 2ರಂದು ಮುಸ್ಲಿಮರು ಬೆದರಿಕೆ ಒಡ್ಡಿದ ಪರಿಣಾಮ ತಾನು ವಿಧಿಯಿಲ್ಲದೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದಿದ್ದಾರೆ.

Scroll to Top