ಬಿಹಾರದಲ್ಲಿ ಮತ ಖರೀದಿಗೆ ಚುನಾವಣೆ ಆಯೋಗದಿಂದ ಸಹಾಯ- ದಿನೇಶ್ ಗುಂಡೂರಾವ್ ಆರೋಪ



(ನ್ಯೂಸ್ ಕಡಬ) newskadaba.com,  .15: ಚುನಾವಣೆ ಘೋಷಣೆಯಾಗಲು ನಾಲ್ಕು ದಿನವಿದ್ದಾಗ 10 ಸಾವಿರ ಹಣ ಮಹಿಳೆಯರ‌ ಖಾತೆಗೆ ಹಾಕಲಾಗಿದೆ. ಸರ್ಕಾರದ ದುಡ್ಡಲ್ಲಿ ಎನ್‌ಡಿಎ ಮತ ಖರೀದಿ ಮಾಡಿದೆ. ಚುನಾವಣಾ ಆಯೋಗ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.







ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ ಕ್ರಾಂತಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಬಿಹಾರ ಚುನಾವಣೆಗೂ ನವೆಂಬರ್ ಕ್ರಾಂತಿಗೂ ಯಾವುದೇ ಸಂಬಂಧವಿಲ್ಲ. ನವೆಂಬರ್ ಕ್ರಾಂತಿ ಎಲ್ಲಿಂದಲೋ ಸೃಷ್ಟಿಯಾಗಿತ್ತು. ಅದಕ್ಕೆ ಯಾವುದೇ ಆಧಾರಗಳಿಲ್ಲ. ಚುನಾವಣೆಗೂ ನಮ್ಮ ರಾಜ್ಯದ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿಹಾರ ಚುನಾವಣೆಯನ್ನು ಹತ್ತಿರದಿಂದ ನೋಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯವರಿಗೆ ಅನುಕೂಲ ಮಾಡಿಕೊಟ್ಟಿದನ್ನು ನೋಡಿದ್ದೇವೆ ಎಂದರು.






 

 

error: Content is protected !!
Scroll to Top