ದೆಹಲಿಯ ಶಾಲೆಗೆ ಹುಸಿ ಬಾಂಬ್‌ ಬೆದರಿಕೆ



(ನ್ಯೂಸ್‌ ಕಡಬ) newskadaba.com,  .17 ಹೊಸದಿಲ್ಲಿ: ಇತ್ತಿಚೇಗೆ ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ಬಾಂಬ್‌ ಅಳವಡಿಸಿರುವುದಾಗಿ ಹುಸಿ ಬೆದರಿಕೆ ಕರೆ ಹಾಗೂ ಇ-ಮೇಲ್‌ ಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸಹ ಖಾಸಗಿ ಶಾಲೆಯೊಂದಕ್ಕೆ ಶಾಲೆಯಲ್ಲಿ ಬಾಂಬ್‌ ಅಳವಡಿಸಿರುವುದಾಗಿ ಬೆದರಿಕೆ ಇಮೇಲ್‌ ಬಂದಿದೆ.







ಈ ಬೆದರಿಕೆ ಇಮೇಲ್‌ ಕಳಿಸಿರುವುದು ಬೇರೆ ಯಾರೂ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ. ಯಾಕೆ ಈ ರೀತಿ ನಕಲಿ ಬಾಂಬ್‌ ಬೆದರಿಕೆ ಮಾಡಿದ್ದ ಎಂದು ಕೇಳಿದರೆ ಆತ ಹೇಳೊ ಕಾರಣ ಕೇಳಿ ಅಚ್ಚರಿಯಾಗೋದು ಗ್ಯಾರಂಟಿ.






ಗುರುವಾರ ದೆಹಲಿಯ ಹೊರವಲಯದ ವಿಶಾಲ್ ಭಾರತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯೊರ್ವ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಾಂಶುಪಾಲರಿಗೆ ಶಾಲ ಆವರಣದಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಹುಸಿ ಬೆದರಿಕೆ ಹಾಕಿ ಇ ಮೇಲ್‌ ಕಳಿಸಿರುವ ಘಟನೆ ನಡೆದಿದೆ. ತಕ್ಷಣ ಪಶ್ಚಿಮ ವಿಹಾರ ಪೂರ್ವ ಪೊಲೀಸ್ ಠಾಣೆಗೆ ಪ್ರಾಶುಂಪಾಲರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇದು ಕೇವಲ ಬೆದರಿಕೆ ಆಗಿದ್ದು ಯಾವುದೇ ಬಾಂಬ್‌ ಅಳವಡಿಸಲಾಗಿಲ್ಲ ಎಂದು ತಿಳಿದು ಬಂದಿದೆ.

error: Content is protected !!
Scroll to Top