(ನ್ಯೂಸ್ ಕಡಬ) newskadaba.com, ಅ.16 ನವದೆಹಲಿ: ದೇಶದಲ್ಲಿ ಈಗ ಕೇವಲ 3 ಜಿಲ್ಲೆಗಳಲ್ಲಿ ಮಾತ್ರ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದೆ. ಉಳಿದೆಡೆ ಬಹುತೇಕ ಸ್ತಬ್ಧವಾಗಿದೆ. ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿರುವ 3 ಸಿಪಿಐ ನಕ್ಸಲ್ ಪೀಡಿತ ಜಿಲ್ಲೆಗಳೆಂದರೆ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಕುರಿತು ಬುಧವಾರ(ಅ.15) ಮಾಹಿತಿ ನೀಡಿರುವ ಗೃಹ ಸಚಿವಾಲಯ, ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಯಶಸ್ವಿಯಾಗಿದ್ದು ಸುಮಾರು 88 ಸಿಪಿಐ ಮಾವೋವಾದಿ ಸದಸ್ಯರು ಶರಣಾಗಿದ್ದಾರೆ ಎಂದು ಹೇಳಿದೆ.
ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿರುವ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಆರರಿಂದ ಮೂರಕ್ಕೆ ಇಳಿಸಲಾಗಿದೆ. ಪ್ರಸ್ತುತ, ಛತ್ತೀಸ್‌ಗಢದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ನಕ್ಸಲ್ ಚಟುವಟಿಕೆಯಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ತಿಳಿಸಿದೆ.
ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಸಿಪಿಐನ 88 ಸದಸ್ಯರು ಶರಣಾಗಿದ್ದು, ಇದು ನಕ್ಸಲ್ ವಿರೋಧಿ ಅಭಿಯಾನದಲ್ಲಿ ಮತ್ತೊಂದು ಯಶಸ್ಸು. ನಕ್ಸಲ್ ಮುಕ್ತ ಭಾರತವನ್ನು ಸೃಷ್ಟಿಸುವ ಮೋದಿ ಸರ್ಕಾರದ ಗುರಿಯತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು 18 ರಿಂದ ಕೇವಲ 11 ಕ್ಕೆ ಇಳಿಸಲಾಗಿದೆ. ಮುಂದಿನ ಮಾರ್ಚ್ ವೊಳಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಇದೆ ಎಂದು ಹೇಳಿದೆ.










