(ನ್ಯೂಸ್ ಕಡಬ) newskadaba.com, ಅ .13. ಸಣ್ಣ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವುದಕ್ಕಾಗಿ ರಿಲಯನ್ಸ್ ಜಿಯೋ ಎಐ ಸಹಾಯಕವನ್ನು ಪರಿಚಯಿಸಿದೆ. ಈ ಎಐ ಸಹಾಯಕವು ದಿನದ 24 ಗಂಟೆಯೂ ನೆರವಾಗುತ್ತದೆ. ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್ ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಆರ್ಡರ್ ಗಳನ್ನು ಪ್ರೊಸೆಸ್ ಮಾಡುವುದು, ಇತ್ಯಾದಿ ಎಲ್ಲವನ್ನೂ ತಪ್ಪದೆ ಮಾಡುತ್ತದೆ. ರಿಲಯನ್ಸ್ ಜಿಯೋ ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಪ್ರದರ್ಶಿಸಿತು..
ಕಿರು ಉದ್ಯಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಯೋ ಏಜೆಂಟಿಕ್ ಎಐ ಸಹಾಯಕವು ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲದು. ಪರೀಕ್ಷಾರ್ಥವಾಗಿ ಶೀಘ್ರದಲ್ಲಿಯೇ ತೆಲುಗು ಮತ್ತು ಕನ್ನಡದಲ್ಲಿ ಪ್ರಾರಂಭ ಆಗಲಿದೆ. ಕಂಪನಿಯು ಇದನ್ನು ಹತ್ತು ಭಾರತೀಯ ಭಾಷೆಗಳಲ್ಲಿ ಪ್ರಾರಂಭಿಸಲು ಯೋಜಿಸಿದೆ.
ಸಣ್ಣ ಅಂಗಡಿಯವರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಜಿಯೋ ಏಜೆಂಟ್ ಎಐ ಮಾರಾಟಗಾರರ ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನೀವು ಹೊಸ ಉತ್ಪನ್ನವನ್ನು ಮಾರಾಟ ಮಾಡಬೇಕಾದರೆ ಜಿಯೋ ಏಜೆಂಟ್ ಎಐ ಸಹಾಯಕ ಸಹಾಯ ಮಾಡುತ್ತದೆ. ಇದು ಉತ್ಪನ್ನಗಳು ಮತ್ತು ಆಫರ್ ಗಳ ಕುರಿತು ಮಾಹಿತಿಯೊಂದಿಗೆ ಗ್ರಾಹಕರಿಗೆ ಕರೆ ಮಾಡಬಹುದು, ಅವರ ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಅಂಗಡಿ ಅಥವಾ ವ್ಯವಹಾರದ ವಿಳಾಸವನ್ನು ಸಹ ಒದಗಿಸಬಹುದು.














