ಸೆಪ್ಟೆಂಬರ್ 28ಕ್ಕೆ ‘ಬಿಗ್ ಬಾಸ್ ಕನ್ನಡ-ಸೀಸನ್ 12’ ಗ್ರ್ಯಾಂಡ್‌ ಓಪನಿಂಗ್!

(ನ್ಯೂಸ್‌ ಕಡಬ) newskadaba.com,  ಸೆ.26 ಬೆಂಗಳೂರು: ಕನ್ನಡಿಗರಿಗೆ ಮನರಂಜನೆಯನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕಲರ್ಸ್‌ ಕನ್ನಡ, ಇದೀಗ ‘ಬಿಗ್‌ ಬಾಸ್‌’ನ ಹನ್ನೆರಡನೇ ಸೀಸನ್‌ ಅನ್ನು ಹೊತ್ತು ತಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್‌ಬಾಸ್’ ರಿಯಾಲಿಟಿ ಷೋ, ಈ ಬಾರಿ “ಎಕ್ಸ್ ಪೆಕ್ಟ್ ದ ಅನ್ ಎಕ್ಸ್ ಪೆಕ್ಟೆಟ್” ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತ ಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮನರಂಜನೆಯ ಹೊಸ ಭಾಷ್ಯವನ್ನು ಬರೆಯಲು ಸಜ್ಜಾಗಿದೆ.

ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್‌ ಸೀಸನ್‌ 12ರ ಗ್ರಾಂಡ್‌ ಓಪನಿಂಗ್‌ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‍‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈಗಾಗಲೇ ಬಿಗ್ ಬಾಸ್‌ನ 11 ಸೀಸನ್‌ಗಳನ್ನು ನೋಡಿ ಯಶಸ್ವಿಯಾಗಿಸಿರೋ ವೀಕ್ಷಕರ ಮನಸಲ್ಲಿ ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರೋ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ.

‘ಬಿಗ್‌ ಬಾಸ್ ಬಗ್ಗೆ ನಮಗೆ ಎಲ್ಲಾ ಗೊತ್ತಿದೆ, ಅಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋ ಅರಿವೂ ನಮಗೆ ಚೆನ್ನಾಗಿ ಇದೆ ಅಂತ ಹೇಳೊರಿಗೆ, ಪ್ರೋಮೊ ಮೂಲಕ “ಓಹ್.. ಭ್ರಮೆ!” ಅಂತ ಕಿಚ್ಚ ಸುದೀಪ್, ಸ್ವೀಟ್‌ ಆಗಿ ಉತ್ತರ ಕೊಟ್ಟಿದಾರೆ. ಈ ಸೀಸನ್‌ನ ಪ್ರೋಮೊಗಳು ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹತ್ತು ಮಿಲಿಯನ್’ಗೂ ಹೆಚ್ಚು ವ್ಯೂಸ್ ಮಾಡುವ ಮೂಲಕ ಸದ್ದು ಮಾಡಿವೆ. ಎಐ ತಂತ್ರಜ್ಞಾನವನ್ನು ಬಳಸಿ ಹೇಳಿರುವ ಕತೆ ಮತ್ತು ಸುದೀಪ್‌ರ ಹೊಸ ಲುಕ್‌ ಹಾಗೂ ಸ್ಟೈಲ್ ಎಲ್ಲೆಡೆ ಹೊಸ ಅಲೆಯನ್ನೇ ಎಬ್ಬಿಸಿದೆ.

Scroll to Top