ಭಾರೀ ಮಳೆ : ವಿದ್ಯುತ್ ಸ್ಪರ್ಶ ಕ್ಕೆ 5 ಮಂದಿ ಸಾವು



(ನ್ಯೂಸ್‌ ಕಡಬ) newskadaba.com,  ಸೆ.23 ಕೋಲ್ಕತ್ತಾ:  ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ವಿದ್ಯುತ್ ಸ್ಪರ್ಶದಿಂದ 5 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.







ಮಧ್ಯರಾತ್ರಿಯ ನಂತರ ಪ್ರಾರಂಭವಾದ ಮಳೆಯಿಂದ ರಸ್ತೆಗಳು ನೀರಿನಲ್ಲಿ ಮುಳುಗಿ ನಗರದಾದ್ಯಂತ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಜನರು ಜಾಗರಣೆ ಮಾಡುವಂತಾಗಿದೆ, ಜೊತೆಗೆ ಹಲವಾರು ಸ್ಥಳಗಳಲ್ಲಿ ಮೊಣಕಾಲು ಆಳದ ನೀರಿನಿಂದ ಮುಳುಗಿ ಸಂಚಾರ ಅಸ್ತವ್ಯಸ್ತವಾಗಿ ಜನರು ಪರದಾಡುವಂತಾಗಿದೆ.






ದುರ್ಗಾ ಪೂಜೆ ಆಚರಣೆಗೆ ಕೆಲವು ದಿನಗಳ ಮೊದಲು ಸುರಿದ ಮಳೆಯ ತೀವ್ರ ಪರಿಣಾಮ ಎದುರಿಸುವಂತಾಗಿದೆ.. ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ, ರಸ್ತೆಗಳು ನೀರಿನಲ್ಲಿ ಮುಳುಗಿ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.

ಜಲಾವೃತವಾದ ಹಿನ್ನೆಲೆಯಲ್ಲಿ ರೈಲ್ವೆ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ ಧಾರಾಕಾರ ಮಳೆಯ ಬಳಿಕ, ಹೌರಾ ನಿಲ್ದಾಣದ ಅಂಗಳ, ಸೀಲ್ಡಾ ದಕ್ಷಿಣ ನಿಲ್ದಾಣದ ಅಂಗಳ, ಚಿತ್ಪುರ ಉತ್ತರ ಕ್ಯಾಬಿನ್, ಹಲವಾರು ಕಾರ್ ಶೆಡ್‌ಗಳು ಮತ್ತು ಸೀಲ್ಡಾ ಯಾರ್ಡ್‌ನ ಅನೇಕ ಭಾಗಗಳಲ್ಲಿ ನೀರು ನಿಂತು ಪರದಾಡುವಂತಾಗಿದೆ.ಹೌರಾ ಮತ್ತು ಸೀಲ್ಡಾ ವಿಭಾಗಗಳ ರೈಲ್ವೆ ಮಾರ್ಗಗಳಲ್ಲಿ ನೀರು ನಿಲ್ಲುವುದರಿಂದ ಅಧಿಕಾರಿಗಳು ಹಲವಾರು ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲು ಮತ್ತು ಸ್ಥಗಿತಗೊಳಿಸಲಾಗಿದೆ.

error: Content is protected !!
Scroll to Top