ಹಸಿರು ಹೈಡ್ರೋಜನ್‌ ಸಂಶೋಧನೆ, ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರದಿಂದ ₹100 ಕೋಟಿ ಆರ್ಥಿಕ ನೆರವು

(ನ್ಯೂಸ್‌ ಕಡಬ) newskadaba.com,  ಸೆ.12 ನವದೆಹಲಿ: ಹಸಿರು ಹೈಡ್ರೋಜನ್‌ ಸಂಶೋಧನೆ ಮತ್ತು ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ ₹100 ಕೋಟಿ ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು. ನವದೆಹಲಿಯಲ್ಲಿ ಇಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ಮೊದಲ ವಾರ್ಷಿಕ ಹಸಿರು ಹೈಡ್ರೋಜನ್ ಸಂಶೋಧನೆ ಮತ್ತು ಅಭಿವೃದ್ಧಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನವೋದ್ಯಮಗಳ ಪ್ರತಿ ಯೋಜನೆಗೆ ಗರಿಷ್ಠ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದರು.

ಹಸಿರು ಹೈಡ್ರೋಜನ್‌ ನಾವೀನ್ಯತೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸಲು ₹100 ಕೋಟಿ ಆರ್ಥಿಕ ನೆರವಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ನವೀನ ಜಲಜನಕ ಉತ್ಪಾದನೆ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆಯ ಪ್ರತಿ ಯೋಜನೆಗೆ ₹5 ಕೋಟಿ ವರೆಗೆ ಒದಗಿಸುತ್ತದೆ. ಎಲೆಕ್ಟ್ರೋಲೈಜರ್ ಉತ್ಪಾದನೆಯಿಂದ ಹಿಡಿದು AI-ಚಾಲಿತ 25 ನವೋದ್ಯಮಗಳು ನಾವೀನ್ಯತೆ ಪ್ರದರ್ಶಿಸುತ್ತಿವೆ ಎಂದರು.

Scroll to Top