ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಹಂಚಿಕೊಂಡ ಪ್ರಧಾನಿ ಮೋದಿ



(ನ್ಯೂಸ್‌ ಕಡಬ) newskadaba.com ಸೆ. 12. ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ಹಂಚಿಕೊಂಡಿದ್ದು, ಇದು ನಮ್ಮ ಇತಿಹಾಸದಲ್ಲಿ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.







1893ರ ಈ ದಿನದಂದು, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದರು. ಇದು ಅತ್ಯಂತ ಗಮನಾರ್ಹ ಭಾಷಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಭಾರತವನ್ನು ಜಗತ್ತಿಗೆ ಸ್ಪಷ್ಟಪಡಿಸಿದ ಮಹತ್ತರವಾದ ಭಾಷಣವಾಗಿದೆ. ಈ ಭಾಷಣವನ್ನು ಹಂಚಿಕೊಂಡ ಪ್ರಧಾನಿ ಮೋದಿ, “1893 ರ ಈ ದಿನ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಈ ಭಾಷಣವನ್ನು ಒಂದು ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.






“ಸಾಮರಸ್ಯ ಮತ್ತು ಸಹೋದರತ್ವವನ್ನು ಒತ್ತಿ ಹೇಳುತ್ತಾ, ಅವರು ವಿಶ್ವ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯ ಆದರ್ಶಗಳ ಬಗ್ಗೆ ಮಾತನಾಡಿದರು. ಇದು ನಿಜವಾಗಿಯೂ ನಮ್ಮ ಇತಿಹಾಸದಲ್ಲಿ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು 132 ವರ್ಷಗಳ ಹಿಂದೆಯೇ ಪ್ರಪಂಚದಾದ್ಯಂತ ಜನರ ನಡುವಿನ ವಿಭಜನೆ ಮತ್ತು ಅಸಹಿಷ್ಣುತೆಯ ಬಗ್ಗೆ ತನ್ನ ಭಾಷಣದಲ್ಲಿ ಬಿತ್ತರಿಸಿದ್ದರು. ಅದು ಇಂದಿಗೂ ಉಳಿದಿದೆ

error: Content is protected !!
Scroll to Top