(ನ್ಯೂಸ್ ಕಡಬ) newskadaba.com ಸೆ. 09. ಗಂಡನ ಜಗಳದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಮೊಸಳೆ ಕಣ್ಣಿಗೆ ಬಿದ್ದ ಕೂಡಲೇ ಮರ ಹತ್ತಿ ಜೀವ ಉಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಸುರೇಶ್ ಎಂಬವರ ಪತ್ನಿ ಮಾಲತಿ ಎಂಬವರು ಚಹಾ ತಯಾರಿಸಲು ಮನಸ್ಸಿಲ್ಲದ ಕಾರಣ ಗಂಡನಿಗೆ “ನೀವೇ ಮಾಡಿ” ಎಂದಿದ್ದರು. ಈ ಒಂದು ಮಾತು ದೊಡ್ಡ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಜಗಳದ ಬಳಿಕ ಕೋಪದಿಂದ ಮನೆಯಿಂದ ಹೊರಟ ಪತ್ನಿ ನೇರವಾಗಿ ಗಂಗಾ ಸೇತುವೆಯವರೆಗೆ ನಡೆದು ಹೋಗಿ, ಆತ್ಮಹತ್ಯೆ ನಿರ್ಧಾರ ಮಾಡಿ ನದಿಗೆ ಹಾರಿ ಬಿಡುತ್ತಾಳೆ.
ಆದರೆ ನೀರಿಗೆ ಬಿದ್ದ ಕೂಡಲೇ ಮಾಲತಿಗೆ ತಾನು ತಪ್ಪು ನಿರ್ಧಾರ ತೆಗೆದುಕೊಂಡಿದ್ದೆಂಬ ಅರಿವು ಬಂದು, ಈಜುತ್ತಾ ಹೇಗೊ ದಡ ತಲುಪಲು ಯತ್ನಿಸುತ್ತಿದ್ದರು. ಈ ಸಂದರ್ಭ ಅವರಿಗೆ ಮೊಸಳೆಯೊಂದು ಕಾಣಸಿಕ್ಕಿದ್ದು, ಮತ್ತೆ ಜೀವ ಉಳಿಸಿಕೊಳ್ಳಲು ತಕ್ಷಣ ಬದಿಯಲ್ಲಿದ್ದ ಮರವೊಂದನ್ನು ಹತ್ತುತ್ತಾಳೆ. ಈ ಮರ ಅವರ ಬದುಕಿಗೆ ಆಕಸ್ಮಿಕವಾಗಿ ಆಶ್ರಯವಾಗುತ್ತದೆ. ಇಡೀ ರಾತ್ರಿಯವರೆಗೂ ಆಕೆ ಮರದ ಮೇಲೆ ಕುಳಿತೇ ಇದ್ದಳು ಎನ್ನಲಾಗಿದೆ.










