ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ತೀವ್ರ ಶೋಧ

(ನ್ಯೂಸ್‌ ಕಡಬ) newskadaba.com, ಆ.18:‌‌ ದ್ವಾರಕಾದ ದೆಹಲಿ ಪಬ್ಲಿಕ್‌ ಶಾಲೆ ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

ಮೂಲಗಳ ಪ್ರಕಾರ, ದೆಹಲಿ ಪೊಲೀಸ್‌ ತಂಡಗಳು ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಗೆ ಧಾವಿಸಿದ್ದು, ಶೋಧ ನಡೆಸುತ್ತಿವೆ. ದ್ವಾರಕಾದ ಸೆಕ್ಟರ್-19‌ ಬಳಿಯ ಸೇಂಟ್‌ ಥಾಮಸ್‌ ಶಾಲೆ, ಸೆಕ್ಟರ್‌-18ರ ದೆಹಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಎಡ್ಜ್‌, ಸೆಂಟ್ರಲ್‌ ಅಕಾಡೆಮಿ ಸ್ಕೂಲ್‌, ಸೆಕ್ಟರ್-10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್‌, ಸೆಕ್ಟರ್-19ರ ದ್ವಾರಕಾ ಹಾಗೂ ಮಾಡರ್ನ್‌ ಇಂಟರ್‌ನ್ಯಾಷನಲ್‌ ಶಾಲೆಗಳಿಗೆ ಬೆದರಿಕೆ ಬಂದಿವೆ. ಎಲ್ಲಾ ಬೆದರಿಕೆಗಳು ಒಂದೇ ಇಮೇಲ್‌ ಐಡಿಯಿಂದ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದರಿಂದ ಎಚ್ಚೆತ್ತ ಪೊಲೀಸರು ತಕ್ಷಣವೇ ಶಾಲೆಗಳಿಗೆ ರಜೆ ಘೋಷಣೆ ಮಾಡಿಸುವುವಂತೆ ಸೂಚನೆ ನೀಡಿದ್ದಾರೆ.

Scroll to Top