ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ವಾಗ್ದಾಳಿ



(ನ್ಯೂಸ್‌ ಕಡಬ) newskadaba.com, ಆ.08: ನರೇಂದ್ರ ಮೋದಿಯವರು ಮತಗಳ್ಳತನ ಮಾಡಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.ಚುನಾವಣಾ ಆಯೋಗ ಮತ್ತು ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ನಾವು 100% ಸಾಬೀತುಪಡಿಸಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ.







ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ಉಳಿಸುವ ಕೆಲಸ ಮಾಡಿದೆವು. ಸಂವಿಧಾನ ಪುಸ್ತಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಗಾಂಧೀಜಿ, ಅಂಬೇಡ್ಕರ್, ನೆಹರೂ, ಪಟೇಲ್‌ರ ಧ್ವನಿ ಇದೆ. ಬಸವಣ್ಣ, ಫುಲೆಯವರ ಧ್ವನಿಯೂ ಇದೆ. ಈ ಪುಸ್ತಕದ ಅಡಿಪಾಯ ಒನ್ ಮ್ಯಾನ್, ಒನ್ ಹೋಪ್, ಒಬ್ಬನಿಗೆ ಒಂದೇ ಮತ. ಭಾರತೀಯರಿಗೆ ಈ ಪುಸ್ತಕ ಒಂದೇ ಮತದ ಹಕ್ಕು ಕೊಟ್ಟಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಮೋದಿಯವರು ಈ ಗ್ರಂಥದ ಮೇಲೆ ಆಕ್ರಮಣ ಮಾಡಿದ್ದಾರೆ. ಸಂವಿಧಾನ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.






error: Content is protected !!
Scroll to Top