ಖ್ಯಾತ ಮ್ಯಾರಥಾನ್‌ ರನ್ನರ್‌ ಫೌಜಾ ಸಿಂಗ್‌ (114 ವರ್ಷ) ರಸ್ತೆ ಅಪಘಾತದಲ್ಲಿ ನಿಧನ!



(ನ್ಯೂಸ್ ಕಡಬ) newskadaba.com, ಜು.15. ಪ್ರಸಿದ್ಧ ಮ್ಯಾರಥಾನ್ ರನ್ನರ್‌ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ ಅಧಂಪುರದ ಬಿಯಾಸ್‌ ಗ್ರಾಮದಲ್ಲಿ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ.







ಅವರ ಕುಟುಂಬದವರ ಪ್ರಕಾರ ಅವರು ತಮ್ಮ ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್‌ಗೆ ಹೊರಟಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಮಾಲೀಕರು ಡಿಕ್ಕಿ ಹೊಡೆದ ನಂತರ ವಾಹನೊಂದಿಗೆ ಪರಾರಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.






error: Content is protected !!
Scroll to Top