(ನ್ಯೂಸ್ ಕಡಬ) newskadaba.com ಜೂ. 21. ಮೀನು ಹಿಡಿಯಲೆಂದು ಬಲೆ ಬೀಸಿದ ಮೀನುಗಾರನಿಗೆ ಸಿಕ್ಕಿದ ತಿಲಿಯಾ ಭೋಮಾ ಹೆಸರಿನ ಮೀನುಗಳಿಂದ ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್ ಎನ್ನುವ ಮೀನುಗಾರರನ ಬಾಳಲ್ಲಿ ಅದೃಷ್ಟ ಒಲಿದಿದೆ. ಅಷ್ಟಕ್ಕೂ ಈ ಮೀನು ಈ ಮೀನುಗಾರ ಬಲೆಗೆ ಬಿದ್ದಿರುವುದು ಒಂದೆರಡಲ್ಲ ಭರ್ಜರಿ 29 ಮೀನುಗಳು.
ಪ್ರತಿ ಮೀನು ಬರೋಬ್ಬರಿ 20 ಕೆಜಿಗಿಂತ ಹೆಚ್ಚು ತೂಗುತ್ತದೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇವುಗಳನ್ನು ಖರೀದಿ ಮಾಡಲು ವ್ಯಾಪಾರಿಗಳು ಭಾರೀ ಪೈಪೋಟಿ ಮಾಡುತ್ತಾರೆ. ಅಂದ ಹಾಗೆ ಈ ಮೀನು ಹರಾಜು ಪ್ರಕ್ರಿಯೆಲ್ಲಿ 33 ಲಕ್ಷ ರೂ.ಗಳಿಗೆ ಮಾರಾಟಗೊಂಡಿದೆ.
ತಿಲಿಯಾ ಭೋಲಾ ಹೆಸರಿನ ಮೀನುಗಳಲ್ಲಿ ಔಷಧೀಯ ಗುಣಗಳಿದ್ದು, ವಿವಿಧ ಗಂಭೀರ ಖಾಯಿಲೆಗಳಿಗೆ ಔಷಧಿ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಸೌಂದರ್ಯವಧಕಗಳ ತಯಾರಿಕೆಯಲ್ಲೂ ಕೂಡಾ ಬಳಕೆ ಮಾಡಲಾಗುತ್ತದೆ.










