ಕಡಬ: ಟ್ಯಾಂಕ್ ಕುಸಿತದ ಭೀತಿ ಮನೆ ಖಾಲಿ ಮಾಡುವಂತೆ ಗ್ರಾಮ ಪಂಚಾಯತ್ ನೋಟೀಸ್



(ನ್ಯೂಸ್ ಕಡಬ) newskadaba.com ಜೂ. 19. ಕೊಯಿಲ ಜನತಾ ಕಾಲೊನಿಯ ಕೊಯಿಲ ಗ್ರಾ.ಪಂ. ಅಧೀನದಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕೊಂದು ಕುಸಿತದ ಸಂಭವದ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದಲ್ಲಿರುವ 6 ಮನೆಯವರಿಗೆ ಮನೆ ಖಾಲಿ ಮಾಡುವಂತೆ ಕೊಯಿಲ ಗ್ರಾಮ ಪಂಚಾಯತ್ ನೋಟಿಸ್ ನೀಡಿದೆ. 1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆಯಡಿ ನಿರ್ಮಾಣವಾಗಿರುವ ಈ ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದೆ.







ಟ್ಯಾಂಕ್‌ನ ಬುಡದಿಂದಲೇ 15 ಅಡಿ ಎತ್ತರದಲ್ಲಿ ಗುಡ್ಡ ಇದ್ದು, ಭಾರೀ ಮಳೆಗೆ ಈಗಾಗಲೇ 8 ಅಡಿ ತನಕ ಧರೆ ಕುಸಿದು ಬಿದ್ದಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗ್ರಾ.ಪಂ. ಸ್ಥಳೀಯ ನಿವಾಸಿಗಳಿಗೆ ಮನೆ ಖಾಲಿ ಮಾಡಿ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಸೂಚನೆ ನೀಡಿದೆ.






error: Content is protected !!
Scroll to Top