newskadaba

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ !!!    

(ನ್ಯೂಸ್ ಕಡಬ) newskadaba.com ದೆಹಲಿ, ಡಿ. 14. ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಸಂಭವಿಸಿದೆ. 17 ವರ್ಷದ ವಿದ್ಯಾರ್ಥಿನಿ ಮತ್ತು ಆಕೆಯ ತಂಗಿ ಶಾಲೆಗೆ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎಸೆದು ಪರಾರಿಯಾಗಿದ್ದು, ನೋವಿನಿಂದ ನರಳಾಡಿದ ಬಾಲಕಿ ರಸ್ತೆಯಲ್ಲಿ ಅತ್ತಿತ್ತ ಓಡಲಾರಂಭಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್ನಲಾಗಿದೆ. ಸಂತ್ರಸ್ಥೆಯ ತಂಗಿ ಘಟನೆಯನ್ನು ಹತ್ತಿರದಿಂದ ನೋಡಿದ್ದು, ನಾನು ಹಾಗೂ […]

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ !!!     Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 14. ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಲಾಗಿದ್ದ ಆಕ್ಸಸ್ ದ್ವಿಚಕ್ರ ವಾಹನ ಕಳವಾದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕರ ಗಾಡಿ ಇದಾಗಿದ್ದು, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಅಪಹರಿಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾಲಕ ಜಮಾಲ್ ಎಂಬವರು ದೂರು ನೀಡಿದ್ದಾರೆ.

ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು Read More »

ಕರಾವಳಿ, ಕರ್ನಾಟಕ

ಪೊಲೀಸರಿಂದ ಭರ್ಜರಿ ಡ್ರಗ್ಸ್ ಬೇಟೆ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ.14 : ಸಿಸಿಬಿ ಪೊಲೀಸರು ಒಂದೇ ದಿನ ಮೂರು ಕಡೆ ದಾಳಿ ಮಾಡಿ ನಾಲ್ವರು ಆರೋಪಿಗಳ ಬಳಿ ಇದ್ದ 35 ಲಕ್ಷ ಡ್ರಗ್ಸ್ ಗಳನ್ನು ವಶಕ್ಕೆ ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳನ್ನು ಅಮರ್ ಮೊಹಮ್ಮದ್ , ಅಬ್ದುಲ್ , ಶಬ್ಬೀರ್ , ಯಾಸೀನ್ ,ರಮೇಶ್ ಎಂದು ಗುರುತಿಸಲಾಗಿದೆ. ಇವರು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಇವರ ಬಳಿಯಿದ್ದ 240 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ಡ್ರಗ್ಸ್ ನ್ನು ಗ್ಯಾಂಗ್

ಪೊಲೀಸರಿಂದ ಭರ್ಜರಿ ಡ್ರಗ್ಸ್ ಬೇಟೆ ➤ ನಾಲ್ವರು ಆರೋಪಿಗಳ ಬಂಧನ Read More »

ಕರ್ನಾಟಕ

ಬಾವಿಗೆ ಬಿದ್ದು ಚಿರತೆ ಮೃತ್ಯು

(ನ್ಯೂಸ್ ಕಡಬ) newskadaba.com  ಕಾರ್ಕಳ ,ಡಿ.14 :ಮನೆಯ ಬಾವಿಗೆ ಬಿದ್ದು ಚಿರತೆಯೊಂದು ಮೃತಪಟ್ಟ ಘಟನೆ ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ನೆಲ್ಲಿಗುರಿಯಲ್ಲಿ ಸಂಭವಿಸಿದೆ. ಜಿಲ್ಲಾ ಪಂಚಾಯತ್ ಸದಸ್ಯ ಮಾಜಿ ಸುಪ್ರೀತ್ ಶೆಟ್ಟಿ ಕೆದಿಂಜೆ ಸ್ಥಳಕ್ಕೆ ಭೇಟಿ ನೀಡಿ  ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಎಸಿಎಫ್ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಚಿರತೆಯ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಬಾವಿಗೆ ಬಿದ್ದು ಚಿರತೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಜಯಪುರ, ಡಿ. 14. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ತಾಯಿ ರೇಣುಕಾ ಅಮೀನಪ್ಪ ಕೋನಿನ್ (26) ಹಾಗೂ ಮಕ್ಕಳಾದ ಯಲ್ಲವ್ವ (2), ಅಮೃತಾ (1) ಎಂದು ಗುರುತಿಸಲಾಗಿದೆ. ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದ್ದು , ಮತ್ತೋರ್ವ ಹೆಣ್ಣು ಮಗುವಿನ ಮೃತದೇಹಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ

ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಷಕಾರಿ ಮದ್ಯ ಸೇವಿಸಿ 6 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com  ಪಾಟ್ನಾ, ಡಿ.14 : ವಿಷಕಾರಿ ಮದ್ಯ ಸೇವಿಸಿ  ಆರು ಮಂದಿ ಮೃತಪಟ್ಟ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಸಂಭವಿಸಿದೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಷಕಾರಿ ಮದ್ಯ ಸೇವಿಸಿ 6 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರು ಢಿಕ್ಕಿ ➤ ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ ಮೃತ್ಯು

(ನ್ಯೂಸ್ ಕಡಬ) newskadaba.com  ಯಲ್ಲಾಪುರ ,ಡಿ .14: ಎರಡು ಕಾರುಗಳ ನಡುವೆ ಭೀಕರ ಅಪಘಾತದ ಸಂಭವಿಸಿದ ಪರಿಣಾಮ ಯಕ್ಷಗಾನ ಭಾಗವತ ಓರ್ವರು  ಮೃತಪಪಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ಮೃತರನ್ನು ತಿಮ್ಮಪ್ಪ ಭಾಗವತ ಬಾಳೆಹದ್ದ (59) ಗುರುತಿಸಲಾಗಿದೆ.ಇವರು ತಂದೆ, ಪ್ರಸಿದ್ದ ಭಾಗವತರಾಗಿದ್ದ ಕೃಷ್ಣ ಭಾಗವತ ಅವರ ಬಳಿ ಭಾಗವತಿಕೆ ಕಲಿತಿದ್ದರು. ಭಾವ ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಜ್ಞಾನ ಪಡೆದರು. ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದ ಇವರು ಸೋಂದಾದ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಒಬ್ಬ

ಕಾರು ಢಿಕ್ಕಿ ➤ ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

2ನೇ ತರಗತಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ ➤ ಏಳರ ಹರೆಯದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಡಿ. 14. ಸಹಪಾಠಿಗಳ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಉ.ಪ್ರ. ಫಿರೋಜಾಬಾದ್ ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಏಳರ ಹರೆಯದ ಶಿವಂ ಎಂದು ಗುರುತಿಸಲಾಗಿದೆ. ಶಿವಂ ಮತ್ತು ಇತರ ಕೆಲವು ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದ್ದು, ಈ ಸಂದರ್ಭ ಇತರ ವಿದ್ಯಾರ್ಥಿಗಳು ಶಿವಂ ಎದೆಯ ಮೇಲೆ ಹಾರಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಶಾಲಾ

2ನೇ ತರಗತಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ ➤ ಏಳರ ಹರೆಯದ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾರಿ ಢಿಕ್ಕಿ ಹೊಡೆದು ಆನೆ ಮೃತ್ಯು

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ.14: ಲಾರಿಯೊಂದು ಢಿಕ್ಕಿಯಾಗಿ ಹೆಣ್ಣಾನೆಯೊಂದು ಮೃತಪಟ್ಟ ಘಟನೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈ ಘಟನೆ ಸಂಭವಿಸಿದೆ. ಲಾರಿಯನ್ನು ಕೇರಳದ ಕಡೆಯಿಂದ ಬರುತ್ತಿದ್ದ ತಮಿಳುನಾಡು ನೋಂದಣಿಯದ್ದು ಎಂದು ಗುರುತಿಸಲಾಗಿದೆ.ಅಪಘಾತದ ಲಾರಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಲಾರಿ ಢಿಕ್ಕಿ ಹೊಡೆದು ಆನೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟ್ರಾಕ್ಟರ್ ಗೆ ಕಂಟೈನರ್ ಲಾರಿ ಡಿಕ್ಕಿ      ➤ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ

 (ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಡಿ.14 ಓವರ್ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಬಳಿ ಗಾಂಧಿಪಾರ್ಕ್ ಎಂಬಲ್ಲಿ ಸಂಭವಿಸಿದೆ. ಪರಿಣಾಮವಾಗಿ ಟ್ರಾಕ್ಟರ್ ಹಿಂಬದಿಯ ಟ್ರಾಲಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.   ನೆಲ್ಯಾಡಿ ಕಡೆಯಿಂದ ಬಿ,ಸಿ ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಗಾಂಧಿಪಾರ್ಕ್ ಬಳಿ ಓವರ್ ಟೇಕ್ ಮಾಡಿದ್ದು, ಆಗ ಟ್ರಾಕ್ಟರ್ ಗೆ ಕಂಟೈನರ್ ಡಿಕ್ಕಿ ಹೊಡೆದಿದೆ ಎಂದು

ಟ್ರಾಕ್ಟರ್ ಗೆ ಕಂಟೈನರ್ ಲಾರಿ ಡಿಕ್ಕಿ      ➤ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top