ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಜಯಪುರ, ಡಿ. 14. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ಸಂಭವಿಸಿದೆ.

ಮೃತರನ್ನು ತಾಯಿ ರೇಣುಕಾ ಅಮೀನಪ್ಪ ಕೋನಿನ್ (26) ಹಾಗೂ ಮಕ್ಕಳಾದ ಯಲ್ಲವ್ವ (2), ಅಮೃತಾ (1) ಎಂದು ಗುರುತಿಸಲಾಗಿದೆ. ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದ್ದು , ಮತ್ತೋರ್ವ ಹೆಣ್ಣು ಮಗುವಿನ ಮೃತದೇಹಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top