newskadaba

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು , ಡಿ 15 : ರಾಜ್ಯ ಸರ್ಕಾರ ನೂತನವಾಗಿ ಆರಂಭಿಸಿರುವ ‘ನಮ್ಮ ಕ್ಲಿನಿಕ್’ ನ್ನು ದ.ಕ. ಜಿಲ್ಲೆಯ 12 ಕಡೆ ನಿರ್ಮಾಣ ಮಾಡಲಾಗಿದೆ. ಮಂಗಳೂರು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್ ನ್ನು ತೆರೆಯಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಸೂಟರ್ಪೇಟೆಯ 6ನೇ ಆಡ್ಡ ರಸ್ತೆಯಲ್ಲಿರುವ ಸಮಾಜ ಭವನದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ. ಕುಮಾರ್, ಆರೋಗ್ಯದ ಬಲವರ್ಧನೆಗೆ, ಮನೆಯ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ Read More »

ಕರ್ನಾಟಕ

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಕಾವೂರು ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತ ಲಮಾಣಿ (38) ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ತಮ್ಮ ಊರಾದ ಬಾಗಲಕೋಟೆಗೆ ಹೋಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 2008 ರ ಬ್ಯಾಚ್ ನಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಇವರು ಮೂಲತಃ ಬಾಗಲಕೋಟೆಯ ಲವಲೇಶ್ವರ ಗ್ರಾಮದವರಾಗಿದ್ದು ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

5, 8ನೇ ತರಗತಿಗೆ ಪೂರಕ ಪರೀಕ್ಷೆ ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ

(ನ್ಯೂಸ್ ಕಡಬ) newskadaba.com  ಬೆಂಗಳೂರು ,ಡಿ.15 : ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಹಿಂಪಡೆದುಕೊಂಡಿದೆ. ಈ ಹಿಂದೆ ಮಾಡಿದ ಆದೇಶ ಪ್ರಕಾರ ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಜೂನ್ ಹಾಗೂ ಜುಲೈ ತಿಂಗಳ ಅಂತ್ಯದಲ್ಲಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಸದ್ಯ ಪರೀಕ್ಷೆ

5, 8ನೇ ತರಗತಿಗೆ ಪೂರಕ ಪರೀಕ್ಷೆ ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ Read More »

ಕರ್ನಾಟಕ

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ     

(ನ್ಯೂಸ್ ಕಡಬ) newskadaba.com   ವಿಟ್ಲ, ಡಿ.15  ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿರಾಗಿದ್ದಾರೆಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ಪುತ್ತೂರಿನಿಂದ ಬಂದು ಮಿತ್ತೂರಿನಲ್ಲಿ ಬಸ್ಸಿನಿಂದ ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಸರ ಎಳೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ರೈಲ್ವೇ ಬ್ರಿಡ್ಜ್  ಬಳಿ ಮಹಿಳೆಯ ಸರ ಕಳ್ಳತನ     ➤ ಪರಾರಿಯಾಗಿದ್ದ ಆರೋಪಿಯ ಬಂಧನ      Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಗಾರಪೇಟೆ, ಡಿ. 15. ಮನೆಯ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.   ಬಂಧಿತರನ್ನು ಮಾಲೂರು ತಾಲ್ಲೂಕಿನ ಚಿಕ್ಕ ಕಡತೂರು ಗ್ರಾಮದ ಶ್ರೀಧರ್, ಸಂತೋಷ್, ಮಂಜುನಾಥ್, ಅವಿನಾಶ್, ಉಮೇಶ್ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೇಡರಹಳ್ಳಿಯ ಜೆ.ಎಂ. ಮನೋಜ್ ಎಂದು ಗುರುತಿಸಲಾಗಿದೆ. ಇವರು ಕೋಲಾರ, ಮಾಸ್ತಿ, ಬೇತಮಂಗಲ ವ್ಯಾಪ್ತಿಯಲ್ಲಿ ಶೀಟುಗಳನ್ನು ಕಳವು ಮಾಡಿ ಬೆಂಗಳೂರು ಕಡೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಡಾನೆ ದಾಳಿ ➤ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಹನೂರು, ಡಿ. 15. ಕಾಡಾನೆ ದಾಳಿಯಿಂದಾಗಿ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಮಹದೇಶ್ವರಬೆಟ್ಟದಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ಪುಟ್ಟಸ್ವಾಮಿ (40) ಎಂದು ಗುರುತಿಸಲಾಗಿದೆ. ಇವರು ಮಹದೇಶ್ವರ ಬೆಟ್ಟದಿಂದ ಕೊಕ್ಕಬೋರೆ ಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದ್ದು, ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಕಾಡಾನೆ ದಾಳಿ ➤ ವ್ಯಕ್ತಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡಲು ಟ್ರ್ಯಾಕ್ಟರ್ ಹತ್ತಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 15. ರಸ್ತೆ ಕಾಮಗಾರಿ ಸಲುವಾಗಿ ರಸ್ತೆಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನಲ್ಲಿ ಚಾಲಕ ಕೀ ಬಿಟ್ಟು ಹೋಗಿದ್ದರ ಪರಿಣಾಮ ಆರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕ ಬೆಳ್ಳಂದೂರಿನಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಅಮೋಘ್ ಎಂದು ಗುರುತಿಸಲಾಗಿದೆ. ಚಿಕ್ಕ ಬೆಳ್ಳಂದೂರಿನ ಕಾರ್ಮೆಲ್ ರಾಮ್ ಶಾಲೆಯ ಹಿಂಭಾಗದ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಮಳೆಯ ಕಾರಣ ಎರಡು ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಬಾಲಕ ಅಮೋಘ್ ಆಟವಾಡುತ್ತಾ ಟ್ರ್ಯಾಕ್ಟರ್ ಹತ್ತಿ ಚಾಲಕನ ಸೀಟಿನಲ್ಲಿ

ಆಟವಾಡಲು ಟ್ರ್ಯಾಕ್ಟರ್ ಹತ್ತಿದ್ದ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪತ್ನಿಯನ್ನು ಕೊಂದು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಪತಿ

(ನ್ಯೂಸ್ ಕಡಬ) newskadaba.com  ಉತ್ತರ ಪ್ರದೇಶ, ಡಿ 14 : ವೈದ್ಯನೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ಅವಳ ಮೃತದೇಹವನ್ನು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಮೃತರನ್ನು ವಂದನಾ ಆವಸ್ಥಿ(28) ಎಂದು ಗುರುತಿಸಲಾಗಿದೆ..ಆರೋಪಿ ಪತಿ ಅಭಿಷೇಕ್ ಆನಸ್ಥಿ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಇಬ್ಬರು ಆಯುರ್ವೇದ ವೈದ್ಯರಾಗಿದ್ದ ಇವರಿಬ್ಬರಿಗೆ ಕೆಲವು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಈ ನಡುವೆ ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.  ಕುರಿತು

ಪತ್ನಿಯನ್ನು ಕೊಂದು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಪತಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ  ➤ ನಾಲ್ವರು ಮೃತ್ಯು             

(ನ್ಯೂಸ್ ಕಡಬ) newskadaba.com ತುಮಕೂರು, ಡಿ. 14. ಕ್ಯಾಂಟರ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸೇರಿ ನಾಲ್ವರು ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ಮೃತರನ್ನು ನಾರಾಯಣಪ್ಪ (50), ಪತ್ನಿ ನಾಗರತ್ನ (45), ಮಗ ಸಾಗರ್ (21) ಮತ್ತು ಸಂಬಂಧಿ ರಾಮಣ್ಣ(25) ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.          

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ  ➤ ನಾಲ್ವರು ಮೃತ್ಯು              Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಯೋಧ ➤ ಐವರು ಮೃತ್ಯು

(ನ್ಯೂಸ್ ಕಡಬ) newskadaba.com ಅಮೃತಸರ, ಡಿ. 14 . ಭದ್ರತಾ ಪಡೆಯ ಸೈನಿಕನೋರ್ವ ತನ್ನ ಕರ್ತವ್ಯದ ಗನ್ ನಿಂದ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿರುವ ಘಟನೆ ಪಂಜಾಬ್ ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿ ಎಸ್ ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಸಂಭವಿಸಿದೆ. ಮೃತಪಟ್ಟವರನ್ನು ಬಿಹಾರದ ಹೆಡ್ ಕಾನ್ಸ್ಟೇಬಲ್ ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮುಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್ ನ ಬಲ್ವಿಂದರ್ ಕುಮಾರ್

ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಯೋಧ ➤ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top