ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 14. ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಲಾಗಿದ್ದ ಆಕ್ಸಸ್ ದ್ವಿಚಕ್ರ ವಾಹನ ಕಳವಾದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.

ಉಪ್ಪಿನಂಗಡಿ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕರ ಗಾಡಿ ಇದಾಗಿದ್ದು, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಅಪಹರಿಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾಲಕ ಜಮಾಲ್ ಎಂಬವರು ದೂರು ನೀಡಿದ್ದಾರೆ.

Scroll to Top