newskadaba

ಖಾಸಗಿ ಬಸ್ ಪಲ್ಟಿ ➤ ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.16.  ಬೆಂಗಳೂರಿನಿಂದ-ಮಂಗಳೂರು, ಕುಮಟಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ರಾಷ್ಟೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ವೇಳೆ ಸಂಭವಿಸಿದೆ.

ಖಾಸಗಿ ಬಸ್ ಪಲ್ಟಿ ➤ ಹಲವರಿಗೆ ಗಾಯ Read More »

ಕರಾವಳಿ

ವೇತನ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ… ಆರೋಪಿ ಅರೆಸ್ಟ್​..

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಸಂಬಳ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಅರೆಸ್ಟ್​ ಮಾಡಲಾಗಿದೆ. ಸಂಬಳ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧನ ಮಾಡಲಾಗಿದೆ. ಶಾಂತಿನಗರ ಮನೆಯೊಂದರಲ್ಲಿ 2 ಲಕ್ಷ ಮೌಲ್ಯದ ಚಿನ್ನಭಾರಣ ಕಳ್ಳತನವಾಗಿದೆ.  ಕದ್ದು‌ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಹುಂಡಿಯಲ್ಲಿ ಚಿನ್ನ ಹಾಕುತ್ತಿದ್ದ, ದೇವಸ್ಥಾನದ ಬಳಿ ಇರುವ ಭೀಕ್ಷಕರಿಗೂ ಕಳ್ಳತನದಲ್ಲಿ ಆರೋಪಿ ಪಾಲು ನೀಡುತ್ತಿದ್ದ.ಸದ್ಯ ಅಶೋಕ್ ನಗರ ಪೊಲೀಸರಿಂದ ಆರೋಪಿ

ವೇತನ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ… ಆರೋಪಿ ಅರೆಸ್ಟ್​.. Read More »

ಕರಾವಳಿ

ಭಾರೀ ಬೆಂಕಿ ಅವಘಡ… ➤‌ ಧಗಧಗನೆ ಹೊತ್ತಿ ಉರಿದ ಕೋಟಿ-ಕೋಟಿ ಮೌಲ್ಯದ ಕಾರು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಕೋಟಿ-ಕೋಟಿ ಮೌಲ್ಯದ ಕಾರುಗಳು ಧಗಧಗನೆ ಹೊತ್ತಿ ಉರಿದಿದೆ. ರಾಮಮೂರ್ತಿ ನಗರದಲ್ಲಿ ಹೈಎಂಡ್​ ಕಾರು​ಗಳು ಭಸ್ಮವಾಗಿದ್ದು, ಕಸ್ತೂರಿನಗರದ ಕಾರು ಗ್ಯಾರೇಜ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಚಾಂದ್ ಪಾಷ, ತಬರೇಜ್​​ ಪಾಷ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಈ ಗ್ಯಾರೇಜ್​​​​ ನಲ್ಲಿ ಐಷಾರಾಮಿ ಕಾರುಗಳ ರಿಪೇರಿ ಮಾಡಲಾಗುತ್ತಿತ್ತು. 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿದೆ ಎಂದು ವರದಿ ತಿಳಿಸಿದೆ. ಗ್ಯಾರೇಜ್​​ನಲ್ಲಿ ಸ್ಟಾಟರ್ ಕೆಲಸ ಮಾಡುವಾಗ  ಬೆಂಕಿ

ಭಾರೀ ಬೆಂಕಿ ಅವಘಡ… ➤‌ ಧಗಧಗನೆ ಹೊತ್ತಿ ಉರಿದ ಕೋಟಿ-ಕೋಟಿ ಮೌಲ್ಯದ ಕಾರು…! Read More »

ಕರ್ನಾಟಕ

ನಾಲ್ವರು ಬಾಲಕಿಯರು ನೀರುಪಾಲು

(ನ್ಯೂಸ್ ಕಡಬ) newskadaba.com ತಮಿಳುನಾಡು, ಫೆ.16. ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಕರೂರ್ ಜಿಲ್ಲೆಯ ಮಾಯನೂರಿನ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಮಿಳರಸಿ,ಇನಿಯಾ,ಲಾವಣ್ಯ ಮತ್ತು ಸೋಫಿಯಾ ಮೃತ ಬಾಲಕಿಯರು.ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಿರುಚ್ಚಿ ಜಿಲ್ಲೆಯ ಥಾನಿಯಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಹೋಗಿದ್ದರು. ಮೊದಲು

ನಾಲ್ವರು ಬಾಲಕಿಯರು ನೀರುಪಾಲು Read More »

ರಾಷ್ಟ್ರೀಯ ನ್ಯೂಸ್

ಅಡಿಕೆ ಆಮದಿನ ಕನಿಷ್ಠ ಬೆಲೆ ಹೆಚ್ಚಳ ➤ ಕೇಂದ್ರದ ನಿರ್ಧಾರಕ್ಕೆ CAMPCO ಸ್ವಾಗತ

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.15.  ಮಂಗಳೂರು ಮೂಲದ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ (CAMPCO) ಅಡಿಕೆ ಆಮದು ಕನಿಷ್ಠ ಬೆಲೆಯನ್ನು ಎಂಐಪಿ ಪ್ರತಿ ಕೆ.ಜಿ.ಗೆ ₹251ಯಿಂದ ₹351ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಬುಧವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ CAMPCO ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ, ಈ ನಿರ್ಧಾರಕ್ಕಾಗಿ ಇಡೀ ಅಡಿಕೆ ಬಂಧುಗಳು ಕೇಂದ್ರಕ್ಕೆ ಕೃತಜ್ಞರಾಗಿದ್ದಾರೆ ಎಂದರು.

ಅಡಿಕೆ ಆಮದಿನ ಕನಿಷ್ಠ ಬೆಲೆ ಹೆಚ್ಚಳ ➤ ಕೇಂದ್ರದ ನಿರ್ಧಾರಕ್ಕೆ CAMPCO ಸ್ವಾಗತ Read More »

ಕರ್ನಾಟಕ

ಬಿಬಿಸಿ ಮೇಲೆ ಐಟಿ ದಾಳಿ ➤ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ!

(ನ್ಯೂಸ್ ಕಡಬ) newskadaba.com. ಕೋಲ್ಕತಾ, ಫೆ.15. ಬಿಬಿಸಿ ಇಂಡಿಯಾದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ದಾಳಿ ನಡೆಸಿರುವುದು ಅತ್ಯಂತ ದುರದೃಷ್ಟಕರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ ಹೇಳಿದರು.  ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ಆರೋಪಿಸಿದ್ದಾರೆ. ಇಂತಹ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ, ಬಿಜೆಪಿ ಪಕ್ಷವು ಮಾಧ್ಯಮವನ್ನು ನಿಯಂತ್ರಿಸುತ್ತಿದೆ. ಒಂದು ದಿನ ದೇಶದಲ್ಲಿ ಮಾಧ್ಯಮವೇ ಇಲ್ಲದಂತೆ ಮಾಡುತ್ತಾರೆ ಎಂದು

ಬಿಬಿಸಿ ಮೇಲೆ ಐಟಿ ದಾಳಿ ➤ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ! Read More »

ಕರ್ನಾಟಕ

ಮನೆ ಕಳ್ಳತನ: ಆರೋಪಿ ಬಂಧನ

(ನ್ಯೂಸ್ ಕಡಬ)newskadaba.com ಬೀದರ್, ಫೆ.15. ವಿವಿಧ 6 ಮನೆಗಳ್ಳತನ ಪ್ರಕರಣಗಳಲ್ಲಿ ನಗರದ ಬಸವ ನಗರ, ಲಾಡಗೇರಿ, ಚಿಯಾನ್ ಕಾಲೋನಿ, ಬ್ಯಾಂಕ್ ಕಾಲೋನಿ, ಬ್ರಹ್ಮಪೂರ ಕಾಲೋನಿ ಮತ್ತು ಚನ್ನಬಸವ ನಗರಗಳಲ್ಲಿ ಕಳುವಾದ ಒಟ್ಟು 7 ಲಕ್ಷ 12000 ಮೊತ್ತದ 178 ಗ್ರಾಂ. ವಿವಿಧ ಆಭರಣಗಳು ಕಳುವು ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಗಾಂಧಿಗಂಜ್ ಪೋಲಿಸ್ ಠಾಣೆಯ ಪಿಎಸ್‍ಐ ಹಣಮರೆಡ್ಡೆಪ್ಪ ಅವರ ನೇತೃತ್ವದಲ್ಲಿ ರಚಿಸಲಾದ ರೌಡಿ ನಿಗ್ರಹ ದಳದ ತಂಡವು ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.  

ಮನೆ ಕಳ್ಳತನ: ಆರೋಪಿ ಬಂಧನ Read More »

ಕರ್ನಾಟಕ

ಸೊಸೈಟಿ ಅಕ್ಕಿಗೆ  ಕನ್ನಹಾಕಿದ ಗಜರಾಜ!!

(ನ್ಯೂಸ್ ಕಡಬ)newskadaba.com ಹಾಸನ, ಫೆ.15 ಆನೆಯೊಂದು ಸೊಸೈಟಿಗೆ ಬಂದು ರೇಷನ್ ಅಕ್ಕಿ ತಿಂದುಹೋದ ವಿಚಿತ್ರ ಘಟನೆ ಹಾಸನದಲ್ಲಿ ಸಂಭವಿಸಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಕಬ್ಬಿಣದ ರೋಲಿಂಗ್ ಷೆಲ್ಟರ್ ಒಡೆದು ಕಾಡಾನೆಯೊಂದು ಅಕ್ಕಿ ತಿಂದು ಹೋಗಿದೆ. ನಿನ್ನೆಯಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು. ಮುಂಜಾನೆ 4.15 ರ ಸಮಯದಲ್ಲಿ ಗಜ ಸೊಸೈಟಿ ಆವರಣಕ್ಕೆ ಬಂದಿದೆ. ಈ ಮುಂದಿನ ಹಾಗೂ ಹಿಂದಿ‌ನ ಬಾಗಿಲನ್ನು ಒಡೆದು ಹದಿಮೂರು ಚೀಲ‌ ಅಕ್ಕಿ ಎಳೆದಾಡಿ

ಸೊಸೈಟಿ ಅಕ್ಕಿಗೆ  ಕನ್ನಹಾಕಿದ ಗಜರಾಜ!! Read More »

ಕರ್ನಾಟಕ

ಮೂವರು ಯುವಕರ ಮೃತ್ಯು ಪ್ರಕರಣಕ್ಕೆ ತಿರುವು ➤‌  ಅಪಘಾತವಲ್ಲ ಹತ್ಯೆಯೆಂದು ದೃಢ!!

(ನ್ಯೂಸ್ ಕಡಬ)newskadaba.com ದಾವಣಗೆರೆ,ಫೆ.15. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ   ರಾತ್ರಿ ಅಪಘಾತದಲ್ಲಿ ದಾವಣಗೆರೆ ಹೊರ ವಲಯದ ಶ್ರೀರಾಮನಗರದ ಮೂವರು ಯುವಕರು ಮೃತಪಟ್ಟಿದ್ದಾರೆ ಎಂಬ ಘಟನೆಯ ಕುರಿತು  ಹಿಂದಿನ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ದಾವಣಗೆರೆಯ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಮೂವರು ಯುವಕರ ಮೃತ್ಯು ಪ್ರಕರಣಕ್ಕೆ ತಿರುವು ➤‌  ಅಪಘಾತವಲ್ಲ ಹತ್ಯೆಯೆಂದು ದೃಢ!! Read More »

ಕರ್ನಾಟಕ

ಕೆಲಸ ಕೊಡಿಸುವುದಾಗಿ ಹಣ ಪಡೆದ ಪ್ರಕರಣ: ➤‌ ಆರೋಪಿಗಳು ಅರೆಸ್ಟ್​

(ನ್ಯೂಸ್ ಕಡಬ)newskadaba.com ಹಾಸನ,ಫೆ.15. ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದಲ್ಲಿ ಸೋಲಾರ್ ಪ್ರಾಜೆಕ್ಟ್ ಕೆಲಸಕೊಡಿಸುವುದಗಿ ನಂಬಿಸಿ 21 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೆ.ಲಕ್ಕಿಹಳ್ಳಿ ಗ್ರಾಮದ ರಘು, ಚಿಕ್ಕಮಗಳೂರು ಜಿಲ್ಲೆಯ ಬಿ.ಕೋಡಿಹಳ್ಳಿ ಗ್ರಾಮದ ಶ್ರೀಧರ್ ಅಲಿಯಾಸ್ ಸಿದ್ದಪ್ಪ ಬಂಧಿತ ಆರೋಪಿಗಳು ಎಂದು ವರದಿಯಾಗಿದೆ. ಬಂಧಿತರಿಂದ 9.19 ಲಕ್ಷ ನಗದು ಮತ್ತು ಮೂರು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ

ಕೆಲಸ ಕೊಡಿಸುವುದಾಗಿ ಹಣ ಪಡೆದ ಪ್ರಕರಣ: ➤‌ ಆರೋಪಿಗಳು ಅರೆಸ್ಟ್​ Read More »

ಕರ್ನಾಟಕ
Scroll to Top