ಸೊಸೈಟಿ ಅಕ್ಕಿಗೆ  ಕನ್ನಹಾಕಿದ ಗಜರಾಜ!!

(ನ್ಯೂಸ್ ಕಡಬ)newskadaba.com ಹಾಸನ, ಫೆ.15 ಆನೆಯೊಂದು ಸೊಸೈಟಿಗೆ ಬಂದು ರೇಷನ್ ಅಕ್ಕಿ ತಿಂದುಹೋದ ವಿಚಿತ್ರ ಘಟನೆ ಹಾಸನದಲ್ಲಿ ಸಂಭವಿಸಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಕಬ್ಬಿಣದ ರೋಲಿಂಗ್ ಷೆಲ್ಟರ್ ಒಡೆದು ಕಾಡಾನೆಯೊಂದು ಅಕ್ಕಿ ತಿಂದು ಹೋಗಿದೆ. ನಿನ್ನೆಯಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು.

ಮುಂಜಾನೆ 4.15 ರ ಸಮಯದಲ್ಲಿ ಗಜ ಸೊಸೈಟಿ ಆವರಣಕ್ಕೆ ಬಂದಿದೆ. ಈ ಮುಂದಿನ ಹಾಗೂ ಹಿಂದಿ‌ನ ಬಾಗಿಲನ್ನು ಒಡೆದು ಹದಿಮೂರು ಚೀಲ‌ ಅಕ್ಕಿ ಎಳೆದಾಡಿ ತಿಂದಿದೆ ಎಂದು ವರದಿಯಾಗಿದೆ.

 

Scroll to Top