ಕೆಲಸ ಕೊಡಿಸುವುದಾಗಿ ಹಣ ಪಡೆದ ಪ್ರಕರಣ: ➤‌ ಆರೋಪಿಗಳು ಅರೆಸ್ಟ್​

(ನ್ಯೂಸ್ ಕಡಬ)newskadaba.com ಹಾಸನ,ಫೆ.15. ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದಲ್ಲಿ ಸೋಲಾರ್ ಪ್ರಾಜೆಕ್ಟ್ ಕೆಲಸಕೊಡಿಸುವುದಗಿ ನಂಬಿಸಿ 21 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೆ.ಲಕ್ಕಿಹಳ್ಳಿ ಗ್ರಾಮದ ರಘು, ಚಿಕ್ಕಮಗಳೂರು ಜಿಲ್ಲೆಯ ಬಿ.ಕೋಡಿಹಳ್ಳಿ ಗ್ರಾಮದ ಶ್ರೀಧರ್ ಅಲಿಯಾಸ್ ಸಿದ್ದಪ್ಪ ಬಂಧಿತ ಆರೋಪಿಗಳು ಎಂದು ವರದಿಯಾಗಿದೆ.

ಬಂಧಿತರಿಂದ 9.19 ಲಕ್ಷ ನಗದು ಮತ್ತು ಮೂರು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ

Scroll to Top