(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಕೋಟಿ-ಕೋಟಿ ಮೌಲ್ಯದ ಕಾರುಗಳು ಧಗಧಗನೆ ಹೊತ್ತಿ ಉರಿದಿದೆ. ರಾಮಮೂರ್ತಿ ನಗರದಲ್ಲಿ ಹೈಎಂಡ್ ಕಾರುಗಳು ಭಸ್ಮವಾಗಿದ್ದು, ಕಸ್ತೂರಿನಗರದ ಕಾರು ಗ್ಯಾರೇಜ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಚಾಂದ್ ಪಾಷ, ತಬರೇಜ್ ಪಾಷ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಈ ಗ್ಯಾರೇಜ್ ನಲ್ಲಿ ಐಷಾರಾಮಿ ಕಾರುಗಳ ರಿಪೇರಿ ಮಾಡಲಾಗುತ್ತಿತ್ತು. 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿದೆ ಎಂದು ವರದಿ ತಿಳಿಸಿದೆ.
ಗ್ಯಾರೇಜ್ನಲ್ಲಿ ಸ್ಟಾಟರ್ ಕೆಲಸ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










