newskadaba

Death, deadbody, Waterfall

ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!!

(ನ್ಯೂಸ್ ಕಡಬ) newskadaba.com ಜು. 15. 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ ಮನೆಯ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಸಂದ್ರ ನಿವಾಸಿಯಾದ ಈ ಬಾಲಕ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಂಗಳವಾರದಂದು ಸಂಜೆ ಶಾಲೆಯಿಂದ ಮರಳಿದ ವಿದ್ಯಾರ್ಥಿ, ಮನೆಯ ಕಟ್ಟಡದ ಮೇಲಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಆತನನ್ನು ನಾಯಂಡನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. […]

ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬದ ಕೋರಿಯಾರ್ ಜನತೆಗೆ ಸಿಹಿ ಸುದ್ದಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ಜು. 15. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಹಾಗೂ ಯಾತ್ರಾರ್ಥಿಗಳ ದಶಕಗಳ ಬಹುದೊಡ್ಡ ಕನಸೊಂದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮ ಹಾಗೂ ಬಳ್ಳ ಆದರ್ಶವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಬರೋಬ್ಬರಿ 3,000 ಲಕ್ಷ ರೂ. (30 ಕೋಟಿ ರೂ.) ಅಂದಾಜು ಮೊತ್ತದ ಬಂಡವಾಳ ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ

ಕಡಬದ ಕೋರಿಯಾರ್ ಜನತೆಗೆ ಸಿಹಿ ಸುದ್ದಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ Read More »

ಕರಾವಳಿ

ಫ್ರಾನ್ಸ್ ಮಣಿಸಿ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಫೈನಲ್ ಗೇರಿದ ಸ್ಪೇನ್!

(ನ್ಯೂಸ್ ಕಡಬ) newskadaba.com ಜು. 15. ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿದ ಸ್ಪೇನ್ ತಂಡವು ಫೈನಲ್ ತಲುಪಿದೆ. ಇದರೊಂದಿಗೆ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ನೇತೃತ್ವದ ಫ್ರಾನ್ಸ್ ತಂಡದ ವಿಶ್ವಕಪ್ ಕನಸು ಭಗ್ನಗೊಂಡಿದೆ. ಸ್ಪೇನ್ ತಂಡವು 2010ರ ಬಳಿಕ ಇದೇ ಮೊದಲ ಬಾರಿಗೆ (ಒಟ್ಟಾರೆ ಎರಡನೇ ಬಾರಿ) ಫಿಫಾ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂದ್ಯದ 20ನೇ ನಿಮಿಷದಲ್ಲಿ ಲಾಮಿನ್ ಯಮಾಲ್ ಮೇಲಿನ

ಫ್ರಾನ್ಸ್ ಮಣಿಸಿ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಫೈನಲ್ ಗೇರಿದ ಸ್ಪೇನ್! Read More »

ಕ್ರೀಡಾ ನ್ಯೂಸ್

ಗಗನಯಾತ್ರಿಯಾಗಿ ಬಾಹ್ಯಾಕಾಶಕ್ಕೆ ಹಾರಿದ ಸ್ಪೇಸ್ ಎಕ್ಸ್ ನ ಮೊದಲ ‘ಫ್ಲೈಟ್ ಸರ್ಜನ್’ ಅನಿಲ್ ಮೆನನ್

(ನ್ಯೂಸ್ ಕಡಬ) newskadaba.com ಜು. 15. ಭಾರತೀಯ ಮೂಲದ ಗಗನಯಾತ್ರಿ ಹಾಗೂ ಯುಎಸ್ ಏರ್‌ಫೋರ್ಸ್‌ನ ಲೆಫ್ಟಿನೆಂಟ್ ಕರ್ನಲ್ ಆಗಿರುವ ಅನಿಲ್ ಮೆನನ್ ಅವರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಪ್ರಯಾಣಕ್ಕಾಗಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಈ ಮೂಲಕ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಹಾಗೂ ಶುಭಾಂಶು ಶುಕ್ಲಾ ಅವರ ನಂತರ ಬಾಹ್ಯಾಕಾಶಕ್ಕೆ ಪಯಣ ಬೆಳೆಸಿದ ಭಾರತೀಯ ಮೂಲದ ಗಗನಯಾತ್ರಿಗಳ ಸಾಲಿಗೆ ಅನಿಲ್ ಮೆನನ್ ಸೇರ್ಪಡೆಯಾಗಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್

ಗಗನಯಾತ್ರಿಯಾಗಿ ಬಾಹ್ಯಾಕಾಶಕ್ಕೆ ಹಾರಿದ ಸ್ಪೇಸ್ ಎಕ್ಸ್ ನ ಮೊದಲ ‘ಫ್ಲೈಟ್ ಸರ್ಜನ್’ ಅನಿಲ್ ಮೆನನ್ Read More »

ತಂತ್ರಜ್ಞಾನ

ಒಮಾನ್ ಕರಾವಳಿ ಹಡಗು ದುರಂತ ಬಂಟ್ವಾಳದ ರಚನ್ ಸೇರಿ ಹತ್ತು ಭಾರತೀಯರು ರಕ್ಷಣೆ, ಓರ್ವ ನಾಪತ್ತೆ

(ನ್ಯೂಸ್ ಕಡಬ) newskadaba.com ಜು. 15. ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಒಮಾನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ 12ರ ಮಧ್ಯರಾತ್ರಿ ಭೀಕರ ಕ್ಷಿಪಣಿ ದಾಳಿ ನಡೆದಿದ್ದು, ಈ ದಾಳಿಯಿಂದ ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರಚನ್ ಆರ್.ಕೆ. (25) ಕೂಡ ಒಬ್ಬರಾಗಿದ್ದಾರೆ. ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಹಡಗಿನ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.

ಒಮಾನ್ ಕರಾವಳಿ ಹಡಗು ದುರಂತ ಬಂಟ್ವಾಳದ ರಚನ್ ಸೇರಿ ಹತ್ತು ಭಾರತೀಯರು ರಕ್ಷಣೆ, ಓರ್ವ ನಾಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಿಕ್ಸರ್ ತಿನ್ನುವಾಗ ಕಡಲೆಕಾಯಿ ಗಂಟಲಿಗೆ ಸಿಲುಕಿ ಮೂರು ವರ್ಷದ ಮಗು ಮೃತ್ಯು!!

(ನ್ಯೂಸ್ ಕಡಬ) newskadaba.com ಜು. 15. ಮನೆಯಲ್ಲಿ ಮಿಕ್ಸರ್ ತಿನ್ನುತ್ತಿದ್ದ ವೇಳೆ ಅದರಲ್ಲಿದ್ದ ಕಡಲೆಕಾಯಿ ಗಂಟಲಲ್ಲಿ ಸಿಲುಕಿದ ಪರಿಣಾಮ ಮೂರು ವರ್ಷದ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗರಾ ಪ್ರದೇಶದ ಕುನ್ನುಂಪುರಂನಲ್ಲಿ ನಡೆದಿದೆ. ಬಾಲಕ ಮಿಕ್ಸರ್ ತಿನ್ನುತ್ತಿದ್ದಾಗ ಆಕಸ್ಮಿಕವಾಗಿ ಕಡಲೆಕಾಯಿ ಗಂಟಲಿಗೆ ಸಿಲುಕಿದ್ದು, ತಕ್ಷಣವೇ ಆತನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್

ಮಿಕ್ಸರ್ ತಿನ್ನುವಾಗ ಕಡಲೆಕಾಯಿ ಗಂಟಲಿಗೆ ಸಿಲುಕಿ ಮೂರು ವರ್ಷದ ಮಗು ಮೃತ್ಯು!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೋಟಗಳಿಗೆ ನಿರಂತರ ಕಾಡಾನೆಗಳ ದಾಳಿ – ರೈತರು ಹೈರಾಣು

(ನ್ಯೂಸ್ ಕಡಬ) newskadaba.com ಜು. 15. ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ರೈತರ ತೋಟಗಳಿಗೆ ಕಾಡಾನೆಗಳ ದಾಳಿ ನಿರಂತರವಾಗಿ ಮುಂದುವರಿದಿದ್ದು, ಜುಲೈ 13ರಂದು ತಡರಾತ್ರಿ ವ್ಯಾಪಕ ಪ್ರಮಾಣದ ಕೃಷಿ ನಾಶ ಸಂಭವಿಸಿದೆ. ಗ್ರಾಮದ ಗುಂಡ್ಲ ನಿವಾಸಿಗಳಾದ ರವೀಂದ್ರ ಕೇಪಣ್ಣ ಮತ್ತು ಅವರ ಕಿರಿಯ ಸಹೋದರ ಸುಬ್ಬಪ್ಪ ಎಂಬವರ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು, ಅಲ್ಲಿ ಬೆಳೆದಿದ್ದ ಬಾಳೆ ಹಾಗೂ ಅಡಿಕೆ ಮರಗಳು ಸೇರಿದಂತೆ ಇನ್ನಿತರ ಪ್ರಮುಖ ಬೆಳೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಸುಳ್ಯ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ

ತೋಟಗಳಿಗೆ ನಿರಂತರ ಕಾಡಾನೆಗಳ ದಾಳಿ – ರೈತರು ಹೈರಾಣು Read More »

ಕರಾವಳಿ, ಕ್ರೈಮ್ ನ್ಯೂಸ್

ಅಂಗನವಾಡಿಯಲ್ಲಿ ಆಟದ ವೇಳೆ ಅನಾಹುತ – ಬಾಲಕಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಜು. 15. ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೋರ್ವಳಿಗೆ ಹಾವು ಕಚ್ಚಿದ ಘಟನೆ ಬೆಳ್ತಂಗಡಿಯ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ವರದಿಯ ಪ್ರಕಾರ, ಫಾತಿಮತ್ ಸ’ಅದಿಯಾ ಎಂಬ ಬಾಲಕಿಯೋರ್ವಳು ಎಂದಿನಂತೆ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ, ಕೊಠಡಿಯಲ್ಲಿದ್ದ ಆಟಿಕೆಗಳ ನಡುವೆ ಅಡಗಿದ್ದ ಹಾವು ಬಾಲಕಿಗೆ ಕಚ್ಚಿದೆ. ತಕ್ಷಣ ಬಾಲಕಿ ಜೋರಾಗಿ ಕೂಗಲಾರಂಭಿಸಿದ್ದು, ಬಾಲಕಿಯನ್ನು ತಕ್ಷಣ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ

ಅಂಗನವಾಡಿಯಲ್ಲಿ ಆಟದ ವೇಳೆ ಅನಾಹುತ – ಬಾಲಕಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಗುಂಡ್ಯ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ- ಸ್ಥಳೀಯರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 15. ಇಚಿಲಂಪಾಡಿ ಸಮೀಪದ ಗುಂಡ್ಯ ಹೊಳೆಯಲ್ಲಿ ಬ್ರಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿರುವುದರಿಂದ ಹೊಳೆಯಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಹೊಳೆಯಲ್ಲಿ ಬಂಡೆ ಕಲ್ಲುಗಳು ಕಾಣಿಸಿಕೊಳ್ಳುತ್ತಿದ್ದು, ಹೊಳೆಯ ಮಧ್ಯದಲ್ಲಿರುವ ಬಂಡೆಕಲ್ಲಿನ ಮೇಲೆ ಮೊಸಳೆ ಇರುವುದು ಜನರ ಕಣ್ಣಿಗೆ ಬಿದ್ದಿದೆ. ಇದು ಪ್ರಚಾರವಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು, ಸ್ಥಳೀಯರು ಮೊಸಳೆಯನ್ನು ಕಂಡು ಮೊಬೈಲ್‌ ಗಳಲ್ಲಿ ಸೆರೆ

ಗುಂಡ್ಯ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ- ಸ್ಥಳೀಯರಲ್ಲಿ ಆತಂಕ Read More »

ಕರಾವಳಿ
Scroll to Top