ಅಂಗನವಾಡಿಯಲ್ಲಿ ಆಟದ ವೇಳೆ ಅನಾಹುತ – ಬಾಲಕಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲು



(ನ್ಯೂಸ್ ಕಡಬ) newskadaba.com ಜು. 15. ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೋರ್ವಳಿಗೆ ಹಾವು ಕಚ್ಚಿದ ಘಟನೆ ಬೆಳ್ತಂಗಡಿಯ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.







ವರದಿಯ ಪ್ರಕಾರ, ಫಾತಿಮತ್ ಸ’ಅದಿಯಾ ಎಂಬ ಬಾಲಕಿಯೋರ್ವಳು ಎಂದಿನಂತೆ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ, ಕೊಠಡಿಯಲ್ಲಿದ್ದ ಆಟಿಕೆಗಳ ನಡುವೆ ಅಡಗಿದ್ದ ಹಾವು ಬಾಲಕಿಗೆ ಕಚ್ಚಿದೆ. ತಕ್ಷಣ ಬಾಲಕಿ ಜೋರಾಗಿ ಕೂಗಲಾರಂಭಿಸಿದ್ದು, ಬಾಲಕಿಯನ್ನು ತಕ್ಷಣ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಯಿತು.






ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಾಲಕಿ ತುರ್ತು ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾಳೆ.

error: Content is protected !!
Scroll to Top