ಕಡಬದ ಕೋರಿಯಾರ್ ಜನತೆಗೆ ಸಿಹಿ ಸುದ್ದಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್



(ನ್ಯೂಸ್ ಕಡಬ) newskadaba.com ಜು. 15. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಹಾಗೂ ಯಾತ್ರಾರ್ಥಿಗಳ ದಶಕಗಳ ಬಹುದೊಡ್ಡ ಕನಸೊಂದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.







ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮ ಹಾಗೂ ಬಳ್ಳ ಆದರ್ಶವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಬರೋಬ್ಬರಿ 3,000 ಲಕ್ಷ ರೂ. (30 ಕೋಟಿ ರೂ.) ಅಂದಾಜು ಮೊತ್ತದ ಬಂಡವಾಳ ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.






ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ ಭಾಗವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಬಂಡವಾಳ ವೆಚ್ಚದ ಲೆಕ್ಕಶೀರ್ಷಿಕೆಯಡಿ ಈ ಬೃಹತ್ ಮೊತ್ತವನ್ನು ಒದಗಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ನಿಯಮಾವಳಿಗಳ ಪ್ರಕಾರ ಪಾರದರ್ಶಕ ಟೆಂಡ‌ರ್ ಪ್ರಕ್ರಿಯೆಯ ಮೂಲಕ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ ಭಾಗವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಬಂಡವಾಳ ವೆಚ್ಚದ ಲೆಕ್ಕಶೀರ್ಷಿಕೆಯಡಿ ಈ ಬೃಹತ್ ಮೊತ್ತವನ್ನು ಒದಗಿಸಿ ಲೋಕೋಪಯೋಗಿ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರಾದ ಡಾ. ಸೋಮನಾಥ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

error: Content is protected !!
Scroll to Top