News Kadaba

ಚಿರತೆ ಮರಿಗಳನ್ನು ಮನೆಗೆ ತಂದು ಸಾಕಿದ ಮಕ್ಕಳು ➤ ಮರಿಗಳನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು

(ನ್ಯೂಸ್ ಕಡಬ)newskadaba.com ಮಂಡ್ಯ, ಫೆ.08. ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮವೊಂದರಲ್ಲಿ ಜಮೀನಿನಲ್ಲಿ ಸಿಕ್ಕ 2 ಚಿರತೆ ಮರಿಗಳನ್ನು  ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿರುವಂತಹ ಘಟನೆ ನಡೆದಿದೆ. ಕೀರ್ತಿಕುಮಾರ್​ ಎನ್ನುವವರ ಜಮೀನಿನಲ್ಲಿ 8 ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಚಿರತೆ ಬೇಟೆಗೆ ಹೋದಾಗ ಮರಿಗಳು ಏಕಾಂಗಿಯಾಗಿ ಜಮೀನಿನಲ್ಲಿ ತಿರುಗುತ್ತಿದ್ದವು. ಆಗ ಅದರಲ್ಲಿ ಎರಡು ಚಿರತೆ ಮರಿಗಳನ್ನು ಮಕ್ಕಳು ಮನೆಗೆ ತೆಗೆದುಕೊಂಡು ಬಂದು ಕೋಳಿ ಗೂಡಿನಲ್ಲಿ 2 ಚಿರತೆ ಮರಿಗಳನ್ನು ಕೂಡಿ ಹಾಕಿದ ಮಕ್ಕಳು ಪೋಷಿಸಿದ್ದಾರೆ. ಚಿರತೆ ಮರಿಗಳನ್ನು […]

ಚಿರತೆ ಮರಿಗಳನ್ನು ಮನೆಗೆ ತಂದು ಸಾಕಿದ ಮಕ್ಕಳು ➤ ಮರಿಗಳನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು Read More »

ಕರ್ನಾಟಕ

             ಉಜಿರೆಯ ವಸತಿಗೃಹದ ಮೇಲೆ ದಾಳಿ, ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು ➤ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು,ಫೆ.08. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಪ್ರದೇಶದ ಲಾಡ್ಜ್ ಮೇಲೆ ದಾಳಿ ನಡೆಸಲಾಗಿದ್ದು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಿಕ ಸಮಾಜ ಸಂಘಟನೆಯ ಕಾರ್ಯಕರ್ತರಿಂದ ಮಾಹಿತಿ ಪಡೆದು ದಾಳಿ ನಡೆಸಿ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಅಮತೆ ವಿಕ್ರಮ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ಎಸ್‌ಪಿ ಪ್ರತಾಪ್ ಸಿಂಗ್ ಥೋರಟ್ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿತು.ಈ ಸಂಬಂಧ ಹೆಚ್ಚಿನ ತನಿಖೆ

             ಉಜಿರೆಯ ವಸತಿಗೃಹದ ಮೇಲೆ ದಾಳಿ, ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು ➤ ಇಬ್ಬರ ಬಂಧನ Read More »

ಕರ್ನಾಟಕ

 ಮನೆ ದಾರಿ ತಿಳಿಯದೆ ಅಳುತ್ತಾ ನಿಂತಿದ್ದ ಬಾಲಕನ ರಕ್ಷಿಸಿದ ಪೇದೆ..!

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.08. ತನ್ನ ಮನೆ ದಾರಿ  ಕಾಣದೆ ಮೆಜೆಸ್ಟಿಕ್‌ ಸಮೀಪ ದಿಕ್ಕು ತಪ್ಪಿ   ಕಂಗಲಾಗಿದ್ದ 13 ವರ್ಷದ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಆತನ ಪೋಷಕರ ಮಡಿಲಿಗೆ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಹೊಸೂರು ರಸ್ತೆಯ ಹೊಂಗಸಂದ್ರದ ನಿವಾಸಿಯಾದ  ಗೌರಿಶಂಕರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಜ್ಞಾನೇಶ್‌ ರಕ್ಷಣೆಗೊಳಗಾದ ಬಾಲಕನಾಗಿದ್ದು, ಆತನನ್ನು ರಕ್ಷಿಸಿದ ಚಿಕ್ಕಪೇಟೆ ಸಂಚಾರ ಠಾಣೆ ಶ್ರೀಕಾಂತ್‌ ಅವರನ್ನು ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ಹಾಗೂ ಸಾರ್ವಜನಿಕರು

 ಮನೆ ದಾರಿ ತಿಳಿಯದೆ ಅಳುತ್ತಾ ನಿಂತಿದ್ದ ಬಾಲಕನ ರಕ್ಷಿಸಿದ ಪೇದೆ..! Read More »

ಕರ್ನಾಟಕ

ಬೆಂಕಿ ಅವಘಡ ಮನೆಯಲ್ಲಿ ಮಹಿಳೆ ಸಜೀವ ದಹನ

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.08. ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ  ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದ ಮಲ್ಲೇಶ್ವರದ ಮಂತ್ರಿ ಮಾಲ್ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ.  ಅಡುಗೆ ಮಾಡುವಾಗ ಗ್ಯಾಸ್‌ ಸ್ಟವ್‌ನಿಂದ ಬೆಂಕಿ ಬಟ್ಟೆಗಳಿಗೆ ತಾಗಿ ಅವಘಡ ನಡೆದಿದೆ. ಮೇರಿ (55) ಮೃತ ಮಹಿಳೆ.  ಮೇರಿ ಅವರ ಮೈದುನನ ತಿಂಗಳ ಕಾರ್ಯ ಇತ್ತು,  ಹೀಗಾಗಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಗ್ಯಾಸ್ ಸ್ಟವ್‌ನಲ್ಲಿ ಬೆಂಕಿ ಪ್ರಮಾಣ ಹೆಚ್ಚಾಗಿದೆ. ಈ ವೇಳೆ ಪಕ್ಕದಲ್ಲೇ ಇಟ್ಟಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯೆಲ್ಲಾ ವ್ಯಾಪಿಸಿದೆ.

ಬೆಂಕಿ ಅವಘಡ ಮನೆಯಲ್ಲಿ ಮಹಿಳೆ ಸಜೀವ ದಹನ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤17 ಗಂಟೆಗಳ ಕಾಲ ಕಟ್ಟಡಗಳ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ!

ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8.  ನವದೆಹಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ  ಮನಸ್ಸು ಕರಗಿಸುವಂತಿದೆ. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು, ಸುರಕ್ಷಿತವಾಗಿ ಇಬ್ಬರು ಮಕ್ಕಳು ಹೊರಬಂದಿದ್ದಾರೆ. ಸಂಕಟದ ಪರಿಸ್ಥಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.

➤17 ಗಂಟೆಗಳ ಕಾಲ ಕಟ್ಟಡಗಳ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ! Read More »

ಅಂತರ್ರಾಷ್ಟ್ರೀಯ ನ್ಯೂಸ್

 ವೇತನ  ನೀಡದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ➤ ರಹಸ್ಯವಾಗಿ ಶವ ಹೂತಿದ್ದ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.08. ವೇತನ ನೀಡದ್ದಕ್ಕೆ ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಯಾರಿಗೂ ತಿಳಿಯದಂತೆ ಸಮಾಧಿ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ರಂಜಾನ್ (40) ಮತ್ತು ರಸೆಲ್ (24) ಬಂಧಿತ ವ್ಯಕ್ತಿಯಾಗಿದ್ದಾರೆ. ಕೆಲದಿನಗಳ ಹಿಂದೆ ಸೀಗೇಹಳ್ಳಿ ಹೆಚ್.ಪಿ.ಪೆಟ್ರೋಲ್ ಬಂಕ್ ಹಿಂಭಾಗದ ಕಾರ್ಮಿಕರ ಶೆಟ್ ನಲ್ಲಿ ಪಶ್ಚಿಮ ಬಂಗಾಳ ಮೂಲಕ ಎಂ.ಡಿ.ರಸೂಲ್ ಹವಾಲ್ದಾರ್ (30) ಆತ್ಮಹತ್ಯೆ ಮಾಡಿಕೊಂಡಿದ್ದ. ಆರೋಪಿಗಳು ಈ ವಿಚಾರವನ್ನು ಯಾರಿಗೂ

 ವೇತನ  ನೀಡದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ➤ ರಹಸ್ಯವಾಗಿ ಶವ ಹೂತಿದ್ದ ಇಬ್ಬರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ರೆಪೋ ದರ ಏರಿಸಿದ ಆರ್.ಬಿ.ಐ ಬ್ಯಾಕ್ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8. ಸತತ ಆರನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಕ್ ತನ್ನ ರೆಪೋ ದರವನ್ನು ಏರಿಕೆ ಮಾಡಿದೆ. 25 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 6.5ಕ್ಕೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್ ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದೆ. ಠೇವಣಿ ಇರಿಸುವವರಿಗೆ ರೆಪೋ ದರ ಏರಿಕೆಯಿಂದ ಪ್ರಯೋಜನವಾಗಲಿದೆ. ಆರ್ ಬಿಐನ ಹಣಕಾಸು ನೀತಿ ಸಮಿತಿ ಮೂರು ದಿನಗಳ ಸಭೆಯ ಬಳಿಕ ರೆಪೋ ದರ

➤ ರೆಪೋ ದರ ಏರಿಸಿದ ಆರ್.ಬಿ.ಐ ಬ್ಯಾಕ್ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ Read More »

ಕರ್ನಾಟಕ

ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ➤ 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಪಾಕಿಸ್ತಾನ, ಫೆ.08.  ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ 30 ಮಂದಿ ಮೃತಪಟ್ಟಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ. ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ ಪ್ರಾಂತ್ಯದ ಶಿತಿಯಾಲ್ ಪ್ರದೇಶದಲ್ಲಿ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆ ಸಂಬಂಧ ಪಾಕಿಸ್ತಾನದ ಅಧ್ಯಕ್ಷ ಡಾ. ಆರಿಫ್ ಅಲ್ವಿ, ಪ್ರಧಾನಿ ಶೆಹಬಾಜ್ ಷರೀಫ್

ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ➤ 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಶಾಲೆಯಿಂದ ಹೊರಗುಳಿದ 688 ಮಕ್ಕಳು!

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ,ಫೆ.08.  ಸಮಗ್ರ ಶಿಕ್ಷಣ ಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 688 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕುಂದಗೋಳ ತಾಲೂಕಿನಲ್ಲಿಯೇ ಅತಿ ಹೆಚ್ಚು (230) ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವರದಿಯಾಗಿದೆ. 2022 ಡಿಸೆಂಬರ್‌ 28ರಿಂದ 2023ರ ಜ. 5ರ ವರೆಗೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಎಲ್ಲ ಜಿಲ್ಲೆಗಳಿಗೆ ಸೂಚನೆ ನೀಡಿದ್ದು,

ಶಾಲೆಯಿಂದ ಹೊರಗುಳಿದ 688 ಮಕ್ಕಳು! Read More »

ಕರ್ನಾಟಕ

ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾದ ಮೈಸೂರಿನ ಕಲಾವಿದ

(ನ್ಯೂಸ್ ಕಡಬ)newskadaba.com ಮೈಸೂರು,ಫೆ.08. ಕನ್ನಡ ಕಲಿಯುವ ಪುಟಾಣಿಗಳ ಅನುಕೂಲಕ್ಕಾಗಿ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಕನ್ನಡ ವರ್ಣಮಾಲೆಗಳ ಪ್ರತಿ ಅಕ್ಷರಕ್ಕೆ ಹೊಂದಿಕೆಯಾಗುವ ಚಿತ್ರಗಳನ್ನು ರಚಿಸಿರುವ ವಿಶೇಷ ಕಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಕಿರಣ್‌ ಕುಮಾರ್‌ ಎಂಬುವವರು ಹಂಚಿಕೊಂಡಿದ್ದ ಟ್ವೀಚ್‌ಗೆ ರೀ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ”ಭಾಷೆ ಕಲಿಸಲು ಇದೊಂದು ಸೃಜನಶೀಲ ಮಾರ್ಗ. ಕನ್ನಡ ಸುಂದರವಾದ ಭಾಷೆ” ಎಂದು ಬಣ್ಣಿಸಿದ್ದಾರೆ  ಎಂದು ವರದಿ

ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾದ ಮೈಸೂರಿನ ಕಲಾವಿದ Read More »

ಕರ್ನಾಟಕ
Scroll to Top